ಮೊಬೈಲ್ ಬಿಟ್ಟು ಪುಸ್ತಕ ಹಿಡಿಯಿರಿ

kavigosti
Published on

ಬೀದರ್: ಮೊಬೈಲ್ ಲೋಕದಲ್ಲಿ ಮುಳುಗಿ ಹೋಗಿರುವ ಮಕ್ಕಳೆಲ್ಲ ಇಂದು ಪುಸ್ತಕ ಹಿಡಿಯುವ ಅವಶ್ಯಕತೆ ಇದೆ ಹಿರಿಯ ಸಾಹಿತಿ ಜಗದೇವಿ ದುಬಲಗುಂಡೆ ಹೇಳಿದರು.

ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ನಿಂದ ಭಾನುವಾರ ನಗರದಲ್ಲಿ ಆಯೋಜಿಸಿದ್ದ ಮಕ್ಕಳ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿ, ಶರಣ ಸಾಹಿತ್ಯವನ್ನು ಜಗತ್ತಿಗೆ ಕೊಟ್ಟ ಈ ನಾಡಿನ ಸಂಸ್ಕೃತಿ ಮುಂದುವರೆಸುವ ಜವಾಬ್ದಾರಿ ಯುವ ಸಮೂಹದ ಮೇಲಿದೆ. ಇಂದಿನ ಮಕ್ಕಳು ಮುಂದಿನ ಉತ್ತಮ ನಾಗರಿಕರಾಗಿ ಹೊರಹೊಮ್ಮಬೇಕು. ಇದಕ್ಕಾಗಿ ಉತ್ತಮ ಸಂಸ್ಕಾರ ಹೊಂದಬೇಕು. ಮೊಬೈಲ್ ಗೀಳು ಬಿಟ್ಟು ಪುಸ್ತಕ ಓದುವ ಅಭಿರುಚಿ, ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು.

ಮಕ್ಕಳ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷೆ ಪಾರ್ವತಿ ಸೋನಾರೆ ಮಾತನಾಡಿ, ಪರಿಷತ್ ಮೂಲಕ ಮಕ್ಕಳಲ್ಲಿ ಸಾಹಿತ್ಯದ ಆಸಕ್ತಿ ಬೆಳೆಸಲು ಮತ್ತು ಉತ್ತಮ ಬಾಲ ಪ್ರತಿಭೆಗಳನ್ನು ಬೆಳಕಿಗೆ ತರುವುದು ಕಾರ್ಯಕ್ರಮ ಉದ್ದೇಶವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ ಸಾಹಿತಿ ಪುಷ್ಪಾ ಕನಕ ಮಾತನಾಡಿ, ಮಕ್ಕಳಲ್ಲಿ ನಾಡಿನ ಬಗ್ಗೆ ಗೌರವ ಇರಬೇಕು. ದೇಶ ಪ್ರೇಮಿಗಳಾಗಬೇಕು. ಬಾಲ್ಯದಿಂದಲೇ ಅವರಲ್ಲಿ ಉತ್ತಮ ಸಂಸ್ಕಾರ ನೀಡಿದರೆ, ಮುಂದೆ ಸಾಧನೆ ಮಾಡುತ್ತಾರೆ ಎಂದರು.

ಸಾಹಿತಿ ರಮೇಶ ಬಿರಾದಾರ, ವಿದ್ಯಾರ್ಥಿ ರಾಜು ಪವಾರ ಮಾತನಾಡಿದರು. ಓಂಪ್ರಕಾಶ ಧಡ್ಡೆ, ವಿಜಯಕುಮಾರ ಸೋನಾರೆ, ಜಟಿಂಗರಾಯ ಡಫಳಾಪೂರ, ಜಗದೇವಿ ತಿಬಶೆಟ್ಟಿ, ಜಗದೀಶ್ವರ ಬಿರಾದಾರ, ನಿರ್ಹಂಕಾರ ಬಂಡಿ, ಅರವಿಂದ ಕುಲಕರ್ಣಿ, ಅರುಣ ಬಗ್ದೂರೆ, ಸಾಯಿಕಿರಣ ಇತರರಿದ್ದರು. ಕೇಶವ ಧಡ್ಡೆ, ವಚನಶ್ರೀ ಮೈನಾಳೆ, ಚಂದ್ರಶೇಖರ ಅನಿರುದ್ಧ, ಪ್ರಜ್ವಲ್ ಬಿರಾದಾರ, ವೈಷ್ಣವಿ ಘಂಟೆ ,ಬಸವಚೇತನ ಚನ್ನಶೆಟ್ಟಿ, ಆಶ್ರಿತಾ ಕುಲಕರ್ಣಿ, ರಘುನಾಥ ಪವಾರ, ಪ್ರಾಂಜಲ್ ಬಿರಾದಾರ, ಬಸವಕಿರಣ ಬಂಡಿ, ವೈಷ್ಣವಿ ಇತರರು ಕವನ ವಾಚನ ಮಾಡಿದರು. ಓಂಕಾರ ಪಾಟೀಲ್ ಸ್ವಾಗತಿಸಿದರು. ಅಭಯಕುಮಾರ ಬಿದ್ರೆ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net