ಮೊಬೈಲ್ ಬಳಕೆಯಿಂದ ದೂರವಿರಿ

14-ANP-P1
ಆನಂದಪುರ ಸಮೀಪದ ಯಡೇಹಳ್ಳಿ ಇಂದಿರಾ ಗಾಂ ವಸತಿ ಶಾಲೆ ವಿದ್ಯಾರ್ಥಿ ಮಂತ್ರಿಮಂಡಲ ಕಾರ್ಯಕ್ರಮವನ್ನು ಪಿಎಸ್‌ಐ ಪ್ರವೀಣ್ ಉದ್ಘಾಟಿಸಿದರು. ಚಂದ್ರಶೇಖರ, ರತ್ನಮ್ಮ, ಚೇತನಾ, ವೆಂಕಟೇಶ್ ಇತರರಿದ್ದರು.
Published on

ಆನಂದಪುರ: ವಿದ್ಯಾರ್ಥಿಗಳು ಮೊಬೈಲ್ ದೂರವಿರಿಸಿ ಸತತವಾಗಿ ಓದುವ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಪಿಎಸ್‌ಐ ಪ್ರವೀಣ್ ಹೇಳಿದರು. ಯಡೇಹಳ್ಳಿ ಇಂದಿರಾಗಾಂ ವಸತಿ ಶಾಲೆಯಲ್ಲಿ ಆಯೋಜಿಸಿದ್ದ ಶಾಲಾ ಮಂತ್ರಿಮಂಡಲ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಭವ್ಯ ಭಾರತದ ಮಹಾನ್ ಪ್ರಜೆಗಳು. ಸಾಕಷ್ಟು ಶೈಕ್ಷಣಿಕ ಮಾಹಿತಿ ನೀಡುತ್ತಿದ್ದರೂ ಮೊಬೈಲ್‌ಗಳ ಆಕರ್ಷಣೆಯಿಂದ ತೊಂದರೆ ವಿಪರೀತವಾಗುತ್ತಿದೆ. ವಿದ್ಯಾರ್ಥಿ ಜೀವನ ಬದುಕಿನ ಸುವರ್ಣಘಟ್ಟ. ಪರಿಪೂರ್ಣ ಆಸಕ್ತಿಯಿಂದ ವಿದ್ಯಾಭ್ಯಾಸ ನಡೆಸುವವರು ಶ್ರೇಷ್ಠ ಸಾಧನೆ ಮಾಡಲು ಸಾಧ್ಯ ಎಂದರು. ಆನಂದಪುರ ಸಮುದಾಯ ಆರೋಗ್ಯ ಕೇಂದ್ರದ ವೈದ್ಯ ಡಾ. ವಿನಯ ಶೇಖರ್ ಮಾತನಾಡಿ, ವೈಯಕ್ತಿಕ ಸ್ವಚ್ಛತೆ, ಉತ್ತಮ ಆಹಾರ ಹಾಗೂ ಆರೋಗ್ಯಕರ ಹವ್ಯಾಸಗಳ ಬಗ್ಗೆ ವಿವರಿಸಿದರು. ವಸತಿ ಶಾಲೆ ಪ್ರಾಚಾರ್ಯ ಚಂದ್ರಶೇಖರ, ಯಡೇಹಳ್ಳಿ ಗ್ರಾಪಂ ಅಧ್ಯಕ್ಷೆ ರತ್ನಮ್ಮ, ಸದಸ್ಯೆ ಚೇತನಾ, ವೆಂಕಟೇಶ್, ಗೋಪಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net