

ಗೊರೇಬಾಳ: ಗ್ರಾಮದ ಸರ್ಕಾರಿ ಮಾದರಿಯ ಹಿರಿಯ ಆಂಗ್ಲ-ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಜನ್ಮದಿನದ ನಿಮಿತ್ತ ಗುರುವಾರ ಮಕ್ಕಳ ದಿನ ಆಚರಿಸಲಾಯಿತು.
ಮುಖ್ಯ ಶಿಕ್ಷಕಿ ವನಮಾಲಾ ಮಾತನಾಡಿ, ಮಕ್ಕಳು ದೇವರ ಸಮಾನರಾಗಿದ್ದಾರೆ. ಮಕ್ಕಳಲ್ಲಿ ಶಿಸ್ತು ಬೆಳೆಸುವುದು ಪಾಲಕರು ಮತ್ತು ಶಿಕ್ಷಕರ ಜವಾಬ್ದಾರಿ ಆಗಿದೆ. ಮಕ್ಕಳು ಒಳ್ಳೆಯ ನಡತೆ ರೂಢಿಸಿಕೊಳ್ಳುವುದರೊಂದಿಗೆ ಮೊಬೈಲ್ ಗೀಳಿನಿಂದ ಹೊರಬಂದು ವಿದ್ಯಾಭ್ಯಾಸದಲ್ಲಿ ನಿರತರಾಗಬೇಕೆಂದು ಹೇಳಿದರು. ಜವಾಹರಲಾಲ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಶಿಕ್ಷಕರಾದ ಸರೋಜಾ, ದೇವಿ, ರೇಖಾ, ಭೂಮಿಕಾ, ಶಾಂತಮ್ಮ, ಪಾರ್ವತಿ, ಚಾಮುಂಡಿ ಇತರರಿದ್ದರು.