

ಚಿತ್ರದುರ್ಗ: ಮೊಬೈಲ್ ಬಳಸುವಲ್ಲಿ ಮಕ್ಕಳು ಮುಂದಿದ್ದು, ಆ ಗೀಳಿನಿಂದ ಹೊರತರುವ ಮೂಲಕ ಸಾಧಕರಾಗಲು ಪ್ರೋತ್ಸಾಹಿಸಬೇಕಿದೆ ಎಂದು ಜಿಪಂ ಮಾಜಿ ಅಧ್ಯಕ್ಷೆ ಶಶಿಕಲಾ ಸುರೇಶ್‌ಬಾಬು ಸಲಹೆ ನೀಡಿದರು.
ಹಿರಿಯೂರು ತಾಲೂಕಿನ ನರಹರಿ ಸದ್ಗುರು ಗ್ರಾಮಾಂತರ ಕಾನ್ವೆಂಟ್‌ನ ಶಾಲಾ ವಾರ್ಷಿಕೋತ್ಸವವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ, ಅವರ ಆಸಕ್ತಿಗೆ ಅನುಗುಣವಾಗಿ ಪಾಲಕರು, ಶಿಕ್ಷಕರು ಉತ್ತೇಜನ ನೀಡಬೇಕಿದೆ ಎಂದರು.
ನರಹರಿ ಸೇವಾ ಪ್ರತಿಷ್ಠಾನದ ಶ್ರೀ ರಾಜಾರಾಮ್ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿದ್ಯಾರ್ಥಿಗಳು ಶಾರದಾಂಬೆ ದೇವಿಗೆ ಪೂಜೆ ಸಲ್ಲಿಸಿದರು. ವೇದ ಸ್ಕೂಲ್‌ನ ಸಂಸ್ಥಾಪಕ ಡಿ.ಟಿ.ರವೀಂದ್ರ, ಎಸ್.ಎಚ್.ಕೃಷ್ಣರೆಡ್ಡಿ, ಕೆ.ಎನ್.ಮಲ್ಲಿಕಾರ್ಜುನ್, ನಾಗರತ್ನಮ್ಮ, ದಿನೇಶರೆಡ್ಡಿ, ಹೇಮಣ್ಣರೆಡ್ಡಿ, ಕೆ.ಆರ್.ನಿಂಗಣ್ಣ, ಕೋಳಿಗೌಡ, ತಿಮ್ಮಣ್ಣ, ಜಿ.ಕೆ.ಪ್ರಸನ್ನ, ಎಸ್.ಟಿ.ಮಂಜುನಾಥ, ಶಶಿಕಲಾ, ಲಕ್ಷ್ಮೀದೇವಿ ಇತರರಿದ್ದರು.