ಮೊಬೈಲ್ ಕಳ್ಳನ ಬಂಧನ, 2.84 ಲಕ್ಷ ರೂ. ಮೌಲ್ಯದ ವಸ್ತುಗಳು ವಶ

AREST
Published on

ಮೈಸೂರು: ಮೊಬೈಲ್ ಅಂಗಡಿಯಲ್ಲಿ ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸಿರುವ ಹೆಬ್ಬಾಳು ಠಾಣೆ ಪೊಲೀಸರು 2,84,200 ರೂ. ಮೌಲ್ಯದ ವಿವಿಧ ಕಂಪನಿಯ 27 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಆ.18 ರಂದು ರಾತ್ರಿ ಪೊಲೀಸರು ಗಸ್ತಿನಲ್ಲಿರುವಾಗ ಸೂರ್ಯ ಬೇಕರಿ ವೃತ್ತದ ಬಳಿ ಅನುಮಾನಾಸ್ಪದವಾಗಿ ನಿಂತಿದ್ದ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆ.15ರಂದು ಮಂಡಿ ಮೊಹಲ್ಲಾದ ಸೆಲ್‌ಸಿಟಿ ಎಂಬ ಅಂಗಡಿಯ ಬೀಗ ಮುರಿದು ಅಂಗಡಿಯಲ್ಲಿಟ್ಟಿದ್ದ ಮೊಬೈಲ್‌ಗಳನ್ನು ಕಳವು ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಜಯನಗರ ಉಪ ವಿಭಾಗದ ಎಸಿಪಿ ಗಜೇಂದ್ರಪ್ರಸಾದ್ ನೇತೃತ್ವದಲ್ಲಿ ಹೆಬ್ಬಾಳು ಪೊಲೀಸ್ ಠಾಣೆಯ ಪ್ರಭಾರ ಪೊಲೀಸ್ ಇನ್ಸ್‌ಪೆಕ್ಟರ್ ಆರ್. ದಿವಾಕರ್, ಪಿಎಸ್‌ಐಗಳಾದ ಸಿ. ಕೀರ್ತಿ, ಅಂಬಮ್ಮ, ಸಿಬ್ಬಂದಿ ಮಲ್ಲಿಕಾರ್ಜುನಪ್ಪ. ರವಿಕುಮಾರ್, ಹರೀಶ್, ಮಹೇಶ್ ಹೊಸಮನಿ, ವೆಂಕಟೇಶ್, ಆಶಾ ಇತರರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net