

ಗುಂಡ್ಲುಪೇಟೆ: ಖಾಸಗಿ ಫೈನಾನ್ಸ್ ಕಂಪನಿಯೊಂದು ತನ್ನ ಸದಸ್ಯರಿಗೆ ವಿತರಿಸಲು ತಂದಿದ್ದ ಮೊಬೈಲ್ ಫೋನ್‌ಗಳನ್ನು ಕಳವು ಮಾಡಿದ್ದವನನ್ನು ಪೊಲೀಸರು ಬಂಧಿಸಿದ್ದಾರೆ.
ಹೆಗ್ಗಡದೇವನಕೋಟೆ ತಾಲೂಕಿನ ಎನ್.ಬೆಳ್ತೂರು ಗ್ರಾಮದ ನಾಗರಾಜ್ ಬಂಧಿತ ಆರೋಪಿ. ಈ ಹಿಂದೆ ಗ್ರಾಮದ ಸ್ಮಫ್ದನ ಫೈನಾನ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ನಾಗರಾಜ್‌ಗೆ ಸಂಸ್ಥೆಯು ಮಹಿಳಾ ಸಂಘದ ಸದಸ್ಯರಿಗೆ ವಿತರಿಸಲು ಮೊಬೈಲ್ ಖರೀದಿಸಿರುವ ಬಗ್ಗೆ ಮಾಹಿತಿಯಿತ್ತು. ಅಲ್ಲದೆ ಕೀಗಳನ್ನು ನಿರ್ದಿಷ್ಟ ಸ್ಥಳದಲ್ಲಿ ಇರಿಸುವ ಬಗ್ಗೆ ಗೊತ್ತಿದ್ದರಿಂದ ಜು.16ರಂದು ರಾತ್ರಿ ಫೈನಾನ್ಸ್ ಕಚೇರಿ ಬೀಗ ತೆರೆದು ಕಪಾಟಿನ 2 ಬಾಕ್ಸ್‌ನಲ್ಲಿಟ್ಟಿದ್ದ 2.5 ಲಕ್ಷ ರೂ.ಬೆಲೆಬಾಳುವ 19 ಮೊಬೈಲ್‌ಗಳನ್ನು ಕಳವು ಮಾಡಿದ್ದ. ಈ ಬಗ್ಗೆ ಸಂಸ್ಥೆಯ ವ್ಯವಸ್ಥಾಪಕ ಹರೀಶ್ ನೀಡಿದ ದೂರು ಸ್ವೀಕರಿಸಿದ ತೆರಕಣಾಂಬಿ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯ ಪತ್ತೆಗೆ ಕ್ರಮಕೈಗೊಂಡಿದ್ದರು.
ಹೆಗ್ಗಡದೇವನಕೋಟೆಯ ಕಬಿನಿ ರೆಸಾರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ ಆರೋಪಿಯನ್ನು ಪತ್ತೆಹಚ್ಚಿ ವಿಚಾರಣೆಗೆ ಒಳಪಡಿಸಿದಾಗ ಮದುವೆ ಮಾಡಿಕೊಳ್ಳಲು ಹಣಕಾಸಿನ ತೊಂದರೆಯಿದ್ದ ಕಾರಣ ಮೊಬೈಲ್ ಕಳ್ಳತನ ಮಾಡಿರುವುದಾಗಿ ಪೊಲೀಸರ ಎದುರು ಒಪ್ಪಿಕೊಂಡಿದ್ದಾನೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ.ಶಿವಕುಮಾರ್ ನಿರ್ದೇಶನದ ಮೇರೆಗೆ ಸಬ್‌ಇನ್ಸ್‌ಪೆಕ್ಟರ್ ಮಂಜುನಾಥನಾಯ್ಕ, ಎಎಸ್‌ಐಗಳಾದ ಎಸ್.ಮಹೇಶ್, ನಂಜುಂಡಸ್ವಾಮಿ, ಸಿಬ್ಬಂದಿ ಸುರೇಶ್, ಮಹೇಶ್, ಮಲ್ಲುಸ್ವಾಮಿ, ಭಗೀರಥ, ಚಾಲಕ ಜಗದೀಶ್ ಇದ್ದರು.