

ಚಿತ್ರದುರ್ಗ: ಅನಿಯಮಿತ ಮೊಬೈಲ್ ಬಳಕೆಯಿಂದ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ತುಮಕೂರಿನ ಮನೋವೈದ್ಯ ಡಾ.ರವಿ ಕುಮಾರ್ ಹೇಳಿದರು. ನಗರದ ಎಸ್‌ಜೆಎಂ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ವೃತ್ತಿ ಕೌಶಲ ತರಬೇತಿ ಕಾರ‌್ಯ ಕ್ರಮದಲ್ಲಿ ಮಾತನಾಡಿದ ಅವರು,ಮೊಬೈಲ್ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿದ್ದು,ಇದು ವಿದ್ಯಾರ್ಥಿಗಳ ಜೀವನದಲ್ಲೂ ಪರಿಣಾಮ ಬೀರುತ್ತದೆ.
ಅರ್ಧ ಗಂಟೆಗಿಂತ ಅಧಿಕ ಕಾಲ ಮೊಬೈಲ್ ಬಳಕೆಯಲ್ಲಿ ತೊಡಗುತ್ತಾರೋ ಅವರು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ,ಖಿನ್ನತೆ ಯಿಂದ ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ಅಗತ್ಯಕ್ಕೆ ತಕ್ಕಷ್ಟು ಮೊಬೈಲ್ ಬಳಕೆ ಆರೋಗ್ಯಕರವೆಂದ ಅವರು,ತಾಳ್ಮೆ ಮತ್ತು ಜ ವಾಬ್ದಾರಿಗಳನ್ನರಿತು ಬದುಕು ಸಾಗಿಸಬೇಕೆಂದರು. ನಂದಕುಮಾರ್,ಪ್ರಾಂಶುಪಾಲ ಡಾ.ಎಲ್.ಈಶ್ವರಪ್ಪ,ಎಂ.ಎಸ್.ಪರಮೇಶ್ವರ್, ಶ್ವೇತಾ,ಎಲ್.ರಾಜಾನಾಯ್ಕ,ಜಿ.ಎಸ್.ನಾಗರಾಜ,ಶಿವಕುಮಾರ್ ಮತ್ತಿತರರು ಇದ್ದರು.