ಮೊದಲು ನಮ್ಮ ಜೀವ, ನಂತರ ಜೀವನ

UK22-Web
ಯಮಕನಮರಡಿಯಲ್ಲಿ ಜರುಗಿದ ಸಭೆಯಲ್ಲಿ ತಹಸೀಲ್ದಾರ್ ಡಾ.ಡಿ.ಎಚ್.ಹೂಗಾರ ಮಾತನಾಡಿದರು. ಎಸ್.ಜೆ.ಸಾಳುಂಕೆ, ಎಸ್.ಎಂ.ಮಾಡೆವಾಲೆ ಇದ್ದರು.
Published on

ಉಳ್ಳಾಗಡ್ಡಿ-ಖಾನಾಪುರ: ಕರೊನಾ ಸೋಂಕು ಒಬ್ಬರಿಂದ ಒಬ್ಬರಿಗೆ ಬಹುಬೇಗ ಹರಡುತ್ತಿದೆ. ಮೊದಲು ಜೀವ, ನಂತರ ಜೀವನ. ಹಾಗಾಗಿ ಎಲ್ಲರೂ ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ತಹಸೀಲ್ದಾರ್ ಡಾ.ಡಿ.ಎಚ್.ಹೂಗಾರ ಕರೆ ನೀಡಿದರು.

ಸಮೀಪದ ಯಮಕನಮರಡಿಯ ಬಿ.ಬಿ.ಹಂಜಿ ಕಲ್ಯಾಣ ಮಂಟಪದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕೋವಿಡ್ ನಿಯಂತ್ರಣ ಮುಂಜಾಗ್ರತಾ ಸಭೆಯಲ್ಲಿ ಮಾತನಾಡಿದ ಅವರು, ಮೊದಲೇ ನಿಯೋಜಿಸಿದ್ದ ಮದುವೆಗಳಿಗಾಗಿ ಕಡ್ಡಾಯವಾಗಿ ತಾಲೂಕಾಡಳಿತದಿಂದ ಅನುಮತಿ ಅಗತ್ಯವಿದೆ. ಕೇವಲ 50 ಜನರು ಮದುವೆಯಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ಜಾತ್ರೆಗಳನ್ನು ಸಂಪೂರ್ಣವಾಗಿ ನಿಷೇಧಿಸಿದ್ದು ಮಂದಿರ-ಮಸೀದಿಗಳಲ್ಲಿ ಪೂಜೆ-ನಮಾಜ್‌ಗಾಗಿ ಒಬ್ಬರಿಗೆ ಅವಕಾಶ ಕಲ್ಪಿಸಲಾಗಿದೆ. ಅಂತ್ಯಸಂಸ್ಕಾರಕ್ಕೆ ಕೇವಲ 20 ಜನರಿಗೆ ಅವಕಾಶ ಕಲ್ಪಿಸಲಾಗಿದೆ ಎಂದರು. ನೋಡಲ್ ಅಧಿಕಾರಿಗಳ ನೇಮಕವಾಗಿದ್ದು,
ಗ್ರಾಪಂ ಅಧಿಕಾರಿಗಳು ಹಾಗೂ ಪೊಲೀಸ್, ಆರೋಗ್ಯ ಇಲಖೆಯವರು ಎಲ್ಲರೂ ಸಹಕರಿಸಿ ಕಾರ್ಯನಿರ್ವಹಿಸುವಂತೆ ತಿಳಿಸಿದರು.

ಯಮಕನಮರಡಿ ಗ್ರಾಮದಲ್ಲಿ ಪ್ರತಿ ಮಂಗಳವಾರ ಸಂತೆ ನಡೆಯುತ್ತಿದ್ದು, ಸುತ್ತಲಿನ ಹಳ್ಳಿಗಳ ಜನ ಸೇರುತ್ತಾರೆ. ಆದ್ದರಿಂದ 2 ವಾರ ಸಂತೆ
ರದ್ದುಗೊಳಿಸುವಂತೆ ರವಿಂದ್ರ ಹಂಜಿ,ಹಾಗೂ ಕೆಲ ವ್ಯಾಪಾರಸ್ಥರು ತಿಳಿಸಿದರು. ಈ ವಿಷಯದ ಬಗ್ಗೆ ಸ್ಥಳಿಯವಾಗಿ ನಿರ್ಣಯ ತೆಗೆದುಕೊಳ್ಳುವಂತೆ ತಹಸೀಲ್ದಾರ್ ಸಲಹೆ ನೀಡಿದರು. ಉಪತಹಸೀಲ್ದಾರ್ ಎಸ್.ಜೆ.ಸಾಳುಂಕೆ, ಕಂದಾಯ ನಿರೀಕ್ಷಕ ಸಿ.ಕೆ.ಕಲಕಾಂಬಕರ, ನೋಡಲ್ ಅಧಿಕಾರಿ ಎಸ್.ಎಂ.ಮಾಡೆವಾಲೆ, ರವಿಂದ್ರ ಹಂಜಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net