ಮೊದಲು ಗುಂಡುತೋಪು ಒತ್ತುವರಿ ತೆರವುಗೊಳ್ಳಲಿ; ರೈತಸಂ-ಹಸಿರು ಸೇನೆ ಒತ್ತಾಯ ಬಡವರ ಅಂಗಡಿ-ಮಳಿಗೆಗಳ ತೆರವಿಗೆ ವಿರೋಧ

17 bgp road 2
Published on

ಬಾಗೇಪಲ್ಲಿ: ಚೇಳೂರು ಹೃದಯಭಾಗದಲ್ಲಿ ಪ್ರಭಾವಿಗಳು ಅತಿಕ್ರಮಣ ಮಾಡಿರುವ ಸರ್ಕಾರಿ ಗುಂಡುತೋಪು ಒತ್ತುವರಿ ತೆರವುಗೊಳಿಸದೆ, ರಸ್ತೆ ವಿಸ್ತರಣೆಗೆ ಬಡ ಅಂಗಡಿ ವ್ಯಾಪಾರಿಗಳ ಮಳಿಗೆಗಳನ್ನು ತೆರವುಗೊಳಿಸಲು ಮುಂದಾಗಿರುವ ಅಧಿಕಾರಿಗಳ ಕ್ರಮಕ್ಕೆ ರೈತಸಂ ಹಾಗೂ ಹಸಿರುಸೇನೆ (ಪ್ರೊ.ನಂಜುಂಡಪ್ಪ ಸ್ಥಾಪಿತ) ಆಕ್ಷೇಪ ವ್ಯಕ್ತಪಡಿಸಿದೆ.

ಸರ್ಕಾರಿ ಗುಂಡುತೋಪು ಒತ್ತುವರಿಯನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿ ಡಾ.ಕೆ.ಸುಧಾಕರ್ ಹಾಗೂ ಜಿಲ್ಲಾಧಿಕಾರಿ ಆರ್.ಲತಾ ಅವರಿಗೆ 6 ತಿಂಗಳ ಹಿಂದೆಯಷ್ಟೇ ರೈತ ಸಂಟನೆಗಳು ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ಪಟ್ಟಣದ ಪತ್ರಕರ್ತರ ಭವನದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದೆ.

ಚೇಳೂರು ಪಟ್ಟಣದ ಮುಖ್ಯರಸ್ತೆಯನ್ನು ಧ್ವಿಪಥ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸಿರುವ ಸುವಾರು 5 ಕೋಟಿ ರೂ. ವೆಚ್ಚದ ಕಾಮಗಾರಿಗೆ ಮೂರು ವರ್ಷಗಳ ಹಿಂದೆ ಶಾಸಕ ಎಸ್.ಸುಬ್ಬಾರೆಡ್ಡಿ ಚಾಲನೆ ನೀಡಿದ್ದರು. ಆದರೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ರಸ್ತೆ ವಿಸ್ತರಣೆ ನೆಪದಲ್ಲಿ ಪ್ರಭಾವಿಗಳು ಒತ್ತುವರಿ ವಾಡಿಕೊಂಡಿರುವ ಮನೆ ಮತ್ತು ಅಂಗಡಿ ಮಳಿಗೆಗಳು ಉಳಿಸಿ ಬಡವರ ಜಾಗದ ಮೇಲೆ ಕಣ್ಣುಹಾಕಿದೆ ಎಂದು ರೈತ ಸಂದ ಅಧ್ಯಕ್ಷ ಜಿ.ಜಿ.ಹಳ್ಳಿ ಬಿ.ನಾರಾಯಣಸ್ವಾಮಿ ಆರೋಪಿಸಿದರು.

ಚೇಳೂರು-ಬಾಗೇಪಲ್ಲಿ ವಾರ್ಗದದಲ್ಲಿನ ಸರ್ಕಾರಿ ಗುಂಡುತೋಪು, ಕರಾಬು ಜಮೀನುಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಕೋಟ್ಯಂತರ ರೂಪಾಯಿ ಸರ್ಕಾರಿ ಜಮೀನು ಪ್ರಭಾವಿಗಳ ಪಾಲಾಗುತ್ತಿದೆ. ಹಾಗಾಗಿ ರಸ್ತೆ ವಿಸ್ತರಣೆಗೆ ಬಡವರ ಅಂಗಡಿ-ಮುಂಗಟ್ಟು ತೆರವುಗೊಳಿಸುವ ಮುನ್ನ ಗುಂಡುತೋಪು ಜಮೀನು ಒತ್ತುವರಿ ತೆರವುಗೊಳಿಸಬೇಕು. ಇಲ್ಲದಿದ್ದರೆ ರಾಜಭವನದ ಎದುರು ಧರಣಿ ನಡೆಸುವುದಾಗಿ ರೈತ ಸಂದ ಚೇಳೂರು ತಾಲೂಕು ಕಾರ್ಯಾಧ್ಯಕ್ಷ ಸೋಮಶೇಖರ್ ಎಚ್ಚರಿಕೆ ನೀಡಿದರು.

ತಾಲೂಕು ಸಂಘದ ಅಧ್ಯಕ್ಷ ಶಿವಾರೆಡ್ಡಿ, ಕಾರ್ಯಾಧ್ಯಕ್ಷ ಸೋಮಶೇಖರ್, ಗೌರವಾಧ್ಯಕ್ಷ ವೆಂಕಟರವಣಪ್ಪ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್, ಸದಸ್ಯರಾದ ಸೀನಪ್ಪ, ಚನ್ನಾರೆಡ್ಡಿ, ಮಂಜುನಾಥ, ದಿನೇಶ್, ವೆಂಕಟರೆಡ್ಡಿ, ಜಗನ್ನಾಥಶೆಟ್ಟಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net