ಮೊದಲಿನಂತಾಗಲಿ ನೆರೆ ಸಂತ್ರಸ್ತರ ಬದುಕು

web 3
Published on

ಬಣಕಲ್: ವರ್ಷ ಕಳೆದರೂ ನೆರೆ ಪೀಡಿತರ ಬದುಕು ಮೊದಲಿನಂತಾಗಲು ಸಾಧ್ಯವಾಗಿಲ್ಲ. ನೆರೆ ಸಂತ್ರಸ್ತರ ಬದುಕು ಮತ್ತೆ ಮೊದಲಿನಂತಾಗಿ ಶಾಶ್ವತ ನೆಲೆ ಕಂಡುಕೊಳ್ಳುವಂತಾಗಲಿ ಎಂದು ನಮ್ಮ ಹಳ್ಳಿ ಹುಡುಗ್ರು ವಾಟ್ಸ್​ಆಪ್ ಗ್ರೂಪ್ ಸದಸ್ಯ ಸಂದೀಪ್ ಜೇನುಬೈಲ್ ಹೇಳಿದರು.

ನಮ್ಮಹಳ್ಳಿ ಹುಡುಗ್ರು ವಾಟ್ಸ್​ಆಪ್ ತಂಡದಿಂದ ನೆರೆಪೀಡಿತ ಪ್ರದೇಶದಲ್ಲಿ ಗಿಡ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಫಿ ದೊರೆ ಸಿದ್ದಾರ್ಥ ಹೆಗ್ಡೆ ಸ್ಮರಣಾರ್ಥ ಮೂಡಿಗೆರೆ ತಾಲೂಕಿನ ನೆರೆಪೀಡಿತ ಪ್ರದೇಶವಾದ ಮಲೆಮನೆ, ಜಾವಳಿ, ಸಂಪ್ಲಿ, ಸುಂಕಸಾಲೆ, ಮಧುಗುಂಡಿ ದುರ್ಗದಹಳ್ಳಿಯಲ್ಲಿ 150ಕ್ಕೂ ಹೆಚ್ಚು ಹಣ್ಣಿನ ಗಿಡಗಳನ್ನು ನಡೆಲಾಗಿದೆ. ಕಳೆದ ವರ್ಷದ ನೆರೆಯಿಂದ ಬರಿದಾದ ಪ್ರದೇಶಗಳನ್ನು ಮತ್ತೆ ಹಸಿರಾಗಿಸಬೇಕಿದೆ ಎಂದರು.

ನಮ್ಮಹಳ್ಳಿ ಹುಡುಗ್ರು ವಾಟ್ಸ್​ಆಪ್ ಗ್ರೂಪ್​ನ ಸದಸ್ಯ ಪ್ರಶಾಂತ್ ಬೆಟ್ಟಗೆರೆ ಮಾತನಾಡಿ, ವಾಟ್ಸ್​ಆಪ್ ತಂಡದ ಮೂಲಕ ಸಕ್ರಿಯವಾಗಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗುವ ಅಗತ್ಯವಿದೆ. ಆಧುನಿಕ ಸವಲತ್ತುಗಳನ್ನು ಬಳಸಿ ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸಬೇಕಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net