ಮೊದಲ ಮಳೆ ಬರಲಿ,ಪರಿಹಾರ ಮುಖ್ಯವಲ್ಲ

CTD ,,,02
Published on

ಚಿತ್ರದುರ್ಗ: ಮಳೆ ಚೆನ್ನಾಗಿ ಬರಲಿ,ಕೆರೆಕಟ್ಟೆಗಳಿಗೆ ನೀರು ತುಂಬಲಿ,ಕಾವೇರಿ ತಮಿಳುನಾಡಿಗೆ ಜಾಸ್ತಿ ಹರಿದು ಹೋಗಲಿ,ಮೇಕೆದಾಟು ಯೋಜನೆ ಅನುಷ್ಠಾನವಾಗಲಿ ಎಂಬುದು ನನ್ನ ಪ್ರಾರ್ಥನೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಚಳ್ಳಕೆರೆಯಲ್ಲಿ ಸೋಮವಾರ ಜರುಗಿ ಶಾಸಕ ಟಿ.ರಘುಮೂರ್ತಿ ಅವರ ಪುತ್ರಿ ಡಾ.ಟಿ.ಆರ್.ಸುಚಿತ್ರಾ-ಡಾ.ಜಿ.ವರುಣ್ ಅವರ ವಿ ವಾಹ ಸಮಾರಂಭದಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ನಾವು ಮಳೆಯಾಗಲಿ,ಕೆರೆಗಳು ತುಂಬಲಿ ಎನ್ನುವವ ರು. ಮಳೆಯಿಂದ ಬೆಂಗಳೂರಲ್ಲಿ ಆವಾಂತರವಾಗಿದೆ. ಅಧ್ಯಯನಕ್ಕೆ ಸೂಚಿಸಿದ್ದೇನೆ.
ಮೊದಲು ಮಳೆ ಬರಲಿ. ಪರಿಹಾರ ಮುಖ್ಯವಲ್ಲ,ಪರಿಹಾರವನ್ನು ಕೇಂದ್ರ ಪರಿಹಾರ ಕೊಡುತ್ತದೆ. ನಾವೂ ಸಹಾಯ ಮಾಡುತ್ತೇವೆ ಎಂದು ರಾಜ್ಯದಲ್ಲಿ ಆಗುತ್ತಿರುವ ಅಧಿಕಮಳೆ,ಬೆಳೆ,ಆಸ್ತಿಪಾಸ್ತಿ ಹಾನಿ ಕುರಿತಂತೆ ಪ್ರತಿಕ್ರಿಯಿಸಿದರು. ಮಾಜಿ ಸಚಿವ ಸಿ.ಪಿ.ಯೋಗೀಶ್ ನನ್ನ ಸಂಪರ್ಕದಲ್ಲಿ ಇಲ್ಲ.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮಾಹಿತಿ ಇರಬಹುದು. ರಾತ್ರಿ ಯಾರಾದರೂ ಕನ್ನಡಕ ಹಾಕಿಕೊಂಡು ರೌಂಡ್ಸ್ ಹಾಕುತ್ತಾರೆಯೇ ಎಂದು ಪ್ರತಿ ಪಕ್ಷ ನಾಯಕ ಆರ್.ಅಶೋಕ್ ಟೀಕೆಗೆ ಪ್ರತ್ಯುತ್ತರ ನೀಡಿದ ಡಿಸಿಎಂ,ನಾನು ಓದುವಾಗ ಕನ್ನಡಕ ಹಾಕಿ ಕೊಳ್ಳುತ್ತೇನೆ.ಅಶೋಕ್ ಯಾಕೆ ರಾತ್ರಿ ಕನ್ನಡಕ ಹಾಕಿಕೊಳ್ತಾರೆ ಗೊತ್ತಿಲ್ಲವೆಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net