ಮೊದಲ ದಿನ 45 ಲಕ್ಷ ರೂ. ಮೌಲ್ಯದ 25 ಟನ್​ ಮಾವು ಮಾರಾಟ

26 Jaggu 8
ಬೆಳಗಾವಿ ಕ್ಲಬ್​ ರಸ್ತೆಯ ಹ್ಯೂಮ್​ ಪಾರ್ಕನಲ್ಲಿ ಮಾವು ಮತ್ತು ಜೇನು ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಶಾಸಕ ಆಸೀಫ್​ ಸೇಠ್​ ಚಾಲನೆ ನೀಡಿದರು. ಮಹಾಂತೇಶ ಮುರಗೋಡ, ಕೆ.ಎನ್​.ಶಮಂತ, ಟಿ.ಎಸ್​.ಮೋರೆ, ಎಂ.ಎಲ್​.ಜಾನಮಟ್ಟಿ ಇತರರಿದ್ದರು.
Published on

ಬೆಳಗಾವಿ: ಜಿಲ್ಲಾಡಳಿತ, ಜಿಪಂ ಹಾಗೂ ತೋಟಗಾರಿಕೆ ಇಲಾಖೆ ಸಂಯುಕ್ತಾಶ್ರಯದಲ್ಲಿ ಶನಿವಾರ ನಗರದ ಹ್ಯೂಮ್​ ಪಾರ್ಕ್​ನಲ್ಲಿ ಆರಂಭವಾದ ಮಾವು ಮತ್ತು ಜೇನು ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಮೊದಲ ದಿನ ಸುಮಾರು 45 ಲಕ್ಷ ರೂ. ಮೌಲ್ಯದ 25 ಟನ್​ ಮಾವು ಮಾರಾಟವಾಗಿದೆ.

ಬೆಳಗಾವಿ ಉತ್ತರ ಶಾಸಕ ಆಸೀಫ್​ ಸೇಠ್​ ಮೇಳಕ್ಕೆ ಚಾಲನೆ ನೀಡಿದರು. ಮಾವು ಮತ್ತು ಜೇನು ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳವು ಏ.26ರಿಂದ ಏ.28ರವರೆಗೆ ನಡೆಯಲಿದೆ. ಮೇಳದಲ್ಲಿ ನೈಸರ್ಗಿಕವಾಗಿ ಮತ್ತು ವೈಾನಿಕವಾಗಿ ಮಾಗಿಸಿದ ವಿವಿಧ ತಳಿಯ ಮಾವುಗಳು ಲಭ್ಯವಿವೆ. 22 ಸ್ಟಾಲ್​ ತೆರೆಯಲಾಗಿದೆ. ಆಪುಸ್​, ತೊತಾಪುರಿ, ಕೇಸರ ಸೇರಿ ವಿವಿಧ ತಳಿಯ ಹಣ್ಣುಗಳು ಮಾರಾಟಕ್ಕಿಡಲಾಗಿದೆ. ಅಲ್ಲದೇ ಬೇರೆ ಬೇರೆ ರಾಜ್ಯಗಳ ಮಾವು ತಳಿಗಳಾದ ಟಾಮಿ, ಮಾಯಾ, ಆಮ್ಲೇಟ್​, ಪುಲಿಹಾರ, ಚೇರುಕಾ, ರಸಮ್​, ಕೇಂಟ್​, ಕೊಬರಿ, ಲಿಟ್ಟಿ, ಸುವರ್ಣ, ಬಳೆ ಮಾವು, ಫೀರಂಗಿ, ವಾನರಾಜ್​, ಶಿಂಧು, ನೀಲಮ್​, ರಾಯಲ್​ ಸ್ಪೇಷಲ್​, ರತ್ನಾ, ರೂಮಾನಿ ಸೇರಿ 40 ವಿಧದ ಹಣ್ಣುಗಳನ್ನು ರೈತರಿಗೆ ಪರಿಚಯಿಸುವುದಕ್ಕೆ ಪ್ರದರ್ಶನದಲ್ಲಿ ಇಡಲಾಗಿದೆ.

ಉದ್ಘಾಟನೆ ಕಾರ್ಯಕ್ರಮದಲ್ಲಿ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಮಹಾಂತೇಶ ಮುರಗೋಡ, ಕೆ.ಎನ್​.ಶಮಂತ, ಟಿ.ಎಸ್​.ಮೋರೆ, ಎಂ.ಎಲ್​.ಜಾನಮಟ್ಟಿ, ಮೋಹನ ಗಾಯಕವಾಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net