ಮೊಟ್ಟೆ ಎಸೆದಿರುವುದು ಹೇಡಿತನದ ಕೆಲಸ

Capture1
Published on

ಬಸವಕಲ್ಯಾಣ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಾರಿನ ಮೊಟ್ಟೆ ಎಸೆದಿರುವುದನ್ನು ಖಂಡಿಸಿ ಕಾಂಗ್ರೆಸ್ನಿಂದ ಸೋಮವಾರ ನಗರದಲ್ಲಿ ಪ್ರತಿಭಟಿಸಲಾಯಿತು. ಪಕ್ಷದ ಮುಖಂಡರಾದ ಮಾಲಾ ಬಿ.ನಾರಾಯಣರಾವ ಅವರ ನೇತೃತ್ವದಲ್ಲಿ ನಗರದ ಗಾಂಧಿ ವೃತ್ತದಿಂದ ಅಂಬೇಡ್ಕರ್ ವೃತ್ತದ ವರೆಗೆ ಮುಖ್ಯರಸ್ತೆ ಮಾರ್ಗವಾಗಿ ಪಾದಯಾತ್ರೆ ನಡೆಸಿ, ಬಿಜೆಪಿ ಸಕರ್ಾರದ ವಿರುದ್ಧ ಘೋಷಣೆ ಕೂಗಿ ಅಕ್ರೊಶ ವ್ಯಕ್ತಪಡಿಸಲಾಯಿತು.

ಮಾಲಾ ಬಿ. ಮಾತನಾಡಿ, ಸಿದ್ದರಾಮಯ್ಯನವರು ಹಿಂದೆ ಐದು ವರ್ಷ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಆಡಳಿತ ನಡೆಸಿದ್ದಾರೆ. ಬಡವರ ಧ್ವನಿಯಾಗಿದ್ದಾರೆ. ಅವರ ಕಾರಿನ ಮೇಲೆ ಮೊಟ್ಟೆ ಎಸೆದಿರುವುದು ಹೇಡಿತನದ ಕೆಲಸವಾಗಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಬಿಜೆಪಿಯವರು ಮೊಟ್ಟೆ ಎಸೆದರೆ ನಾವು ಸಗಣಿ ಎಸೆಯಲು ಹಿಂಜರಿಯುವುದಿಲ್ಲ ಎಂದರು.

ಪಕ್ಷದ ಮುಖಂಡ ಶಂಕರ ಜಮಾದಾರ ಮಾತನಾಡಿದರು. ಪ್ರಮುಖರಾದ ಸುಧಾಕರ್ ಗುರ್ಜರ್, ದಿಲೀಪ ಸಿಂಧೆ, ಯುವರಾಜ ಭೆಂಡೆ, ಸುರೇಶ ಮೋರೆ, ಡಾ.ಖದೀರೋದ್ದಿನ್, ಮನೋಜ ಮಾಶೆಟ್ಟೆ, ಚಂದ್ರಕಾಂತ ಮೇತ್ರೆ, ಅಶೋಕ ಜಮಾದಾರ, ಅಶೋಕ ಢಗಳೆ, ಪಿಂಟು ಕಾಂಬಳೆ ಪತರ್ಾಪುರ, ಧೂಳಪ್ಪ ಕಾಮಣ್ಣ, ಶಿವಾನಂದ ಜಮಾದಾರ ಇತರರಿದ್ದರು.

ರಾಜ್ಯಪಾಲರಿಗೆ ಬರೆದ ಮನವಿಪತ್ರವನ್ನು ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಸಾವಿತ್ರಿ ಸಲಗರ ಅವರಿಗೆ ಸಲ್ಲಿಲಾಯಿತು. ಪಿಸ್ಐಗಳಾದ ಅಮರ ಕುಲಕಣರ್ಿ, ಪುಷ್ಪಾ, ರೇಣುಕಾ ಬಂದೋಬಸ್ತ್ ಕಲ್ಪಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net