ಮೊಟ್ಟೆ ಎಸೆದ ಕಿಡಿಗೇಡಿಗಳನ್ನು ಬಂಧಿಸಿ

congress protest
Published on

ಬೀದರ್: ಕೊಡಗು ಜಿಲ್ಲೆಯಲ್ಲಿ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದಿರುವುದನ್ನು ಖಂಡಿಸಿ ಸಂವಿಧಾನ ಸಂರಕ್ಷಣಾ ಸಮಿತಿ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿತು.

ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನೆ ನಡೆಸಿದ ಸಮಿತಿ ಪ್ರಮುಖರು, ಭದ್ರತಾ ಲೋಪದ ಹೊಣೆ ಹೊತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜೀನಾಮೆ ನೀಡಬೇಕು. ಮೊಟ್ಟೆ ಎಸೆದ ಕಿಡಿಗೇಡಿಗಳನ್ನು ಬಂಧಿಸುವುದರ ಜತೆಗೆ ಸಿದ್ದರಾಮಯ್ಯ ಅವರಿಗೆ ಭದ್ರತೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

ಜಿಪಂ ಮಾಜಿ ಸದಸ್ಯ ಅಮೃತರಾವ ಚಿಮಕೋಡ, ಪ್ರಮುಖರಾದ ಬಾಬುರಾವ ಪಾಸ್ವಾನ್, ಬಸವರಾಜ ಮಾಳಗೆ, ಮಾಳಪ್ಪ ಅಡಸಾರೆ, ಜಾನ್ ವೇಸ್ಲಿ, ಆಶೋಕ ಮಾಳಗೆ, ತುಕರಾಮ ಚಿಮಕೋಡ, ಗೋವರ್ಧನ್ ರಾಠೋಡ್, ಬಾಬು ಅಲ್ಲೂರೆ, ಶಂಕರ ದೊಡ್ಡಿ, ಕುಶಾಲ ಹಾಸಗೊಂಡ, ಹಸನ ಪರ್ವೇಸ್, ಸಚಿನ್ ಮಲ್ಕಪುರ, ಮಲ್ಲಿಕಾರ್ಜುನ ಬಿರಾದಾರ್, ಸಂಜಯ ಜಾಗೀರದಾರ್, ಮುಕೇಶ್, ಲೋಕೇಸ್, ಹಣಮಂತ ಮಲ್ಕಾಪುರ, ತಿಪ್ಪಣ್ಣ, ರಮೇಶ ಚಿಮಕೋಡ, ಜಾಲೇಂದ್ರ ಮಾಳೆಗಾಂವ, ಸಂತೋಷ ಜೋಳದಪಾಕೆ, ಓಂಕರ ಗಾದಗಿ, ಸಿದ್ದು, ಶ್ರೀಮಂತ, ಬಚ್ಚನ್ ಇತರರಿದ್ದರು. ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net