

ಬೀದರ್: ತಾಲ್ಲೂಕಿನ ಮೊಗದಾಳ ಗ್ರಾಮದಲ್ಲಿ ಲೈಫ್ ಚಾಲೇಂಜಿಂಗ್ ರೆವೆಲೇಷನ್ ಮಿನಿಸ್ಟ್ರಿಯ ನೂತನ ಚರ್ಚ್ ಉದ್ಘಾಟಿಸಲಾಯಿತು.
ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಂಜಯ್ ಜಾಗೀರದಾರ್ ಹಾಗೂ ಜಹೀರಾಬಾದ್‍ನ ಮುಖಂಡ ಜಂಗಮ ಗೋಪಿ ಜಂಟಿಯಾಗಿ ಕೇಕ್ ಕತ್ತರಿಸಿ ಉದ್ಘಾಟಿಸಿದರು. ಕ್ರೈಸ್ತ ಧರ್ಮವು ಪ್ರೀತಿ, ಸಹನೆ, ತ್ಯಾಗ, ಸಹಬಾಳ್ವೆ ಸಂದೇಶಗಳನ್ನು ಸಾರಿದೆ. ಶಿಕ್ಷಣ, ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಕ್ರೈಸ್ತ ಸಂಸ್ಥೆಗಳ ಕೊಡುಗೆ ಅಪಾರವಾಗಿದೆ ಎಂದು ಸಂಜಯ್ ಜಾಗೀರದಾರ್ ಹೇಳಿದರು.
ಸದ್ಯ ಸ್ಪರ್ಧಾತ್ಮಕ ಯುಗ ಇದೆ. ಹೀಗಾಗಿ ಕ್ರೈಸ್ತರು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು. ಅವರನ್ನು ಉನ್ನತ ಅಧಿಕಾರಿಗಳನ್ನಾಗಿ ಮಾಡಲು ಪ್ರಯತ್ನಿಸಬೇಕು ಎಂದು ಸಲಹೆ ಮಾಡಿದರು.
ಚರ್ಚ್ ಪಾಸ್ಟರ್ ಸತೀಶಕುಮಾರ, ಗ್ರಾಮ ಪಂಚಾಯಿತಿ ಸದಸ್ಯ ಥಾಮಸ್ ಬಾಪೂರ, ಪ್ರಮುಖರಾದ ರಮೇಶ ಬಾಬು, ಜೀವನ್ ಜಾಗೀರದಾರ್, ಜಾಕೋಬ್ ಮುಸ್ತಾಪುರಕರ್, ಯೇಶಪ್ಪ ಮನ್ನಳ್ಳಿ, ಸಾಲೋಮನ್ ಕಮಠಾಣ, ಸಂತೋಷ ಚಿಂತಲಗೇರಾ, ಸ್ವಾಮಿದಾಸ್, ಸಾಲೋಮನ್ ರಾಜಗೀರಾ, ಯೇಸುದಾಸ ಮನ್ನಳ್ಳಿ, ಸಂತೋಷ ಮತ್ತಿತರರು ಇದ್ದರು.