ಮೊಕದ್ದಮೆ ದಾಖಲಿಸದಂತೆ ಉಪ ಅಧೀಕ್ಷಕರಿಗೆ ಮನವಿ

8 vpt 2
Published on

ವಿರಾಜಪೇಟೆ: ನಗರದಲ್ಲಿ ಶನಿವಾರ ಸಂಜೆಯಿಂದ ಭಾನುವಾರ ಬೆಳಗಿನ ತನಕ ನಡೆದ ಐತಿಹಾಸಿಕ ಗೌರಿ-ಗಣೇಶೋತ್ಸವದ ಶೋಭಾಯಾತ್ರೆಯ ಸಂದರ್ಭ ಹೆಚ್ಚಿನ ಶಬ್ದವನ್ನು ಒಳಗೊಂಡ ಡಿಜೆ ಬಳಕೆ ಮಾಡಿದ ಹಿನ್ನಲೆ 16 ಉತ್ಸವ ಸಮಿತಿಗಳ ಡಿಜೆ ಆಪರೇಟರ್, ಮಾಲೀಕ, ಟೆಕ್ನಿಷಿಯನ್, ವಾಹನ ಚಾಲಕರ ಮೇಲೆ ಪ್ರಕರಣ ದಾಖಲಾಗಿದ್ದು, ಸದರಿ ಪ್ರಕರಣ ದಾಖಲಿಸಬಾರದು ಹಾಗೂ ಅವರ ಮೇಲೆ ದಂಡ ವಿಧಿಸಬಾರದೆಂದು ವಿರಾಜಪೇಟೆ ಗಾಂದಿನಗರ ಗಣೇಶೋತ್ಸವ ಸಮಿತಿ ಅಧ್ಯಕ್ಷ ಪಿ.ಎ. ಮಂಜುನಾಥ್ ವಿರಾಜಪೇಟೆ ಉಪ ಅಧೀಕ್ಷಕರಿಗೆ ಮನವಿ ಮಾಡಿದ್ದಾರೆ.

ಇಷ್ಟು ವರ್ಷಗಳು ಯಾವುದೇ ರೀತಿಯ ಕಲಹಗಳಿಲ್ಲದೇ, ಜಾತಿ-ಬೇಧ ಲೆಕ್ಕಿಸದೇ ಅನ್ನೋನ್ಯವಾಗಿ ಶೋಭಾಯಾತ್ರೆ ನಡೆಸುತ್ತಾ ಬರುತ್ತಿದ್ದೇವೆ. ತಮಗೂ ತಿಳಿದಂತೆ ಕರ್ನಾಟಕ ರಾಜ್ಯದಲ್ಲೇ ದಸರಾ ಹೊರತುಪಡಿಸಿದರೆ, ನಮ್ಮ ವೀರಾಜಪೇಟೆಯಲ್ಲೇ ಗೌರಿಗಣೇಶೋತ್ಸವಕ್ಕೆ ಹೆಚ್ಚಾಗಿ ಜನರು ಆಗಮಿಸಿ ಸಂಭ್ರಮಿಸುತ್ತಿದ್ದಾರೆ. ಇವುಗಳೆಲ್ಲಾ ಕೇವಲ ಸಾರ್ವಜನಿಕರೊಂದಿಗೆ, ದಾನಿಗಳಿಂದ ಮತ್ತು ವರ್ತಕರಲ್ಲಿ ಚಂದಾ ವಸೂಲಿ ಮಾಡಿ ಸಮಿತಿ ಸದಸ್ಯರು ಹಗಲು ರಾತ್ರಿ ಕಷ್ಟಪಟ್ಟು ಸಮಿತಿಯವರು ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ಆಯೋಜನೆ ಮಾಡುತ್ತಿದ್ದಾರೆ, ಸಾರ್ವಜನಿಕರಿಗೆ ಈ ಬಗ್ಗೆ ಆಕ್ಷೇಪಣೆ ಇಲ್ಲ. ಆದ್ದರಿಂದ ಯಾರೊಬ್ಬರ ಮೇಲೂ ಮೊಕದಮ್ಮೆ ದಾಖಲಿಸಬಾರದೆಂದು ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net