ಮೈಸ್ಪೆಸ್​ ಸರೋಜಾ ಸೂಟ್ಸ್​ ಹೋಟೆಲ್ಸ್​ ಆರಂಭ

Nishant
Published on

ಕಲಬುರಗಿ: ನಗರದ ೧೭೧೭ ಥ್ರಿಲರ್​ ಬ್ರೇವರಿಸ್​ ಹೊಟೇಲ್​ನ್ನು ಗ್ರೇಟ್​ ಡೆಸ್ಟಿನೇಷನ್ಸ್​ ಹೋಟೆಲ್ಸ್​ ಆ್ಯಂಡ್​ ರೆಸರ‍್ಟ್​ ಮ್ಯಾನೇಜ್ಮೆಂಟ್​ ಅಡಿ ಪಡೆದು, ಅತ್ಯಾಧುನಿಕ ಸೇವಾಸೌಲಭ್ಯಗಳೊಂದಿಗೆ ಮೈಸ್ಪೆಸ್​ ಸರೋಜಾ ಸೂಟ್ಸ್​ ಹೋಟೆಲ್ಸ್​ ಆ್ಯಂಡ್​ ರೆಸರ‍್ಟ್​ ಆರಂಭಿಸಲಾಗುತ್ತಿದೆ ಎಂದು ಉಪಾಧ್ಯ ನಿಶಾಂತಕುಮಾರ ತಿಳಿಸಿದರು. ಗ್ರೇಟ್​ ಡೆಸ್ಟಿನೇಷನ್ಸ್​ ಹೋಟೆಲ್ಸ್​ ಆ್ಯಂಡ್​ ರೆಸರ‍್ಟ್​ ಮ್ಯಾನೇಜ್ಮೆಂಟ್​ ದೇಶದ ಪ್ರಮುಖ ನಗರಗಳಲ್ಲಿ ಅದ್ಭುತ ಸೇವೆ ಒದಗಿಸುತ್ತಿದ್ದು, ಉತ್ತರ ರ‍್ನಾಟಕದಲ್ಲೇ ಮೊದಲ ಸೂಟ್ಸ್​ ಹೋಟೆಲ್​ ಆರಂಭಿಸಲಾಗುತ್ತಿದೆ. ಪ್ರವಾಸಿಗರಿಗೆ, ಗ್ರಾಹಕರಿಗೆ ಗುಣಮಟ್ಟದ ಆತಿಥ್ಯ ಕಲ್ಪಿಸಲಾಗುತ್ತಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ನಗರದ ಶಹಾಬಾದ್​ ರಿಂಗ್​ ವೃತ್ತದ ಸಮೀಪದಲ್ಲಿರುವ ಬೃಹತ್​ ಕಟ್ಟಡದಲ್ಲಿ ಗ್ರಾಹಕರಿಗೆ, ಪ್ರವಾಸಿಗರಿಗೆ ಬೇಕಾದ ಎಲ್ಲ ವ್ಯವಸ್ಥೆಯನ್ನು ಸಿದ್ಧಪಡಿಸಲಾಗಿದೆ. ಒತ್ತಡದ ಮಧ್ಯೆ ಸಮಯ ಕಳೆಯಲು ಸಂಗೀತ ಸಂಜೆ, ಕುಟುಂಬದ ಜತೆ ಕಾಲ ಕಳೆಯಲು ಉತ್ಕಷ್ಟ ಸೇವೆ ಪೂರೈಸಲಾಗುತ್ತಿದೆ ಎಂದರು. ರ‍್ಷಾನಂದ ಗುತ್ತೇದಾರ್​, ವನಿತೇಶ ಗುತ್ತೇದಾರ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net