ಮೈಸೆಮ್ ವಿದ್ಯಾರ್ಥಿಗಳಿಗೆ ಬಹುಮಾನ

Published on

ಮೈಸೂರು: ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ, ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದಿಂದ ಅಂತಾರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೈಸೂರು ಕಾಲೇಜ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಮ್ಯಾನೇಜ್‌ಮೆಂಟ್(ಮೈಸೆಮ್) ವಿದ್ಯಾರ್ಥಿಗಳು ಬಹುಮಾನ ಪಡೆದಿದ್ದಾರೆ.
ಶಾಲಾ, ಕಾಲೇಜು ಮತ್ತು ಯುವ ಸಂಘಟನೆಗಳಿಗಾಗಿ ಆಯೋಜಿಸಿದ್ದ ಪೋಸ್ಟರ್ ಮೇಕಿಂಗ್‌ನಲ್ಲಿ ಕಾಲೇಜಿನ ಎಂ.ಮೇಘನಾ (ದ್ವಿತೀಯ), ಎನ್.ಎಂ.ದಿವ್ಯಾ, (ತೃತೀಯ), ಸಣ್ಣಕತೆ ರಚನೆಯಲ್ಲಿ ಮೊಹಮ್ಮದ್ ಅಫ್ಜಲ್ ಪಾಷಾ (ದ್ವಿತೀಯ), ಪ್ರಬಂಧ ಸ್ಪರ್ಧೆಯಲ್ಲಿ ನಿಶ್ಚಿತಾ (ತೃತೀಯ) ಬಹುಮಾನ ಪಡೆದಿದ್ದಾರೆ ಎಂದು ಪ್ರಾಂಶುಪಾಲ ಡಾ.ಎಂ.ಎಸ್.ಪ್ರಭುಸ್ವಾಮಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net