ಮೈಸೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಪ್ರತಿಭಟನೆ

mysore
Published on

ಮೈಸೂರು: ಮೈಸೂರು ವಿಶ್ವವಿದ್ಯಾಲಯದ ಸಮಾಜ ಕಾರ್ಯ ಅಧ್ಯಯನ ವಿಭಾಗಕ್ಕೆ ಹೆಚ್ಚುವರಿ ಪ್ರಾಧ್ಯಾಪಕರ ನೇಮಕಕ್ಕೆ ಆಗ್ರಹಿಸಿ ವಿದ್ಯಾರ್ಥಿಗಳು ಗುರುವಾರ ಪ್ರತಿಭಟನೆ ನಡೆಸಿದರು.

ಮೈವಿವಿ ಕಾರ್ಯಸೌಧ ಕ್ರಾರ್ಫರ್ಡ್ ಭವನದ ಎದುರು ಜಮಾವಣೆಗೊಂಡ ಈ ಅಧ್ಯಯನ ವಿಭಾಗದ ವಿದ್ಯಾರ್ಥಿಗಳು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಮೈವಿವಿ ಎಂಎಸ್‌ಡಬ್ಲುೃ ವಿಭಾಗ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಸಂಶೋಧನೆಗೆ ಅವಕಾಶ ಕಲ್ಪಿಸಲು ಶ್ರಮಿಸುತ್ತಿದೆ. ಆದರೆ, ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳ ಮತ್ತು ಪಠ್ಯಕ್ರಮದ ವಿಸ್ತರಣೆಯಿಂದಾಗಿ ಪ್ರಸ್ತುತ ಇರುವ ಅಧ್ಯಾಪಕರು ಸಾಲುತ್ತಿಲ್ಲ ಎಂದು ಪ್ರತಿಭಟನಾಕಾರರು ಹೇಳಿದರು.

ಅಧ್ಯಾಪಕರ ಕೊರತೆಯಿಂದ ಶೈಕ್ಷಣಿಕ ಕಾರ್ಯಕ್ರಮಗಳು, ಕ್ಷೇತ್ರ ಕಾರ್ಯ ಸಮರ್ಪಕವಾಗಿ ಮಾಡಲು ಆಗುತ್ತಿಲ್ಲ. ಆದ್ದರಿಂದ ವಿಭಾಗಕ್ಕೆ ಅಗತ್ಯವಿರುವ ಹೆಚ್ಚುವರಿ ಅಧ್ಯಾಪಕರನ್ನು ನೇಮಿಸಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಿಗುವಂತೆ ಮಾಡಬೇಕು ಎಂದು ಆಗ್ರಹಿಸಿದರು.

ವಿದ್ಯಾರ್ಥಿಗಳಾದ ರೂಪೇಶ್, ದರ್ಶನ್, ಹರ್ಷಿತ್, ಆರೋಗ್ಯರಾಜು, ರಮ್ಯಾ, ಗೌರವ್, ತರುಣ್, ಪ್ರಜ್ವಲ್, ಸಾಗರ್, ಕೌಶಿಕ್, ರಾಮಸ್ವಾಮಿ, ಜೀವನ್‌ಗೌಡ, ಶಿವಾರ್ಜುನ್, ಪ್ರಮೋದಾ, ಯಶಸ್ವಿನಿ ಬಿ.ನಾಯಕ್, ಚೈತ್ರ, ಮಮತಾ, ಲಾವಣ್ಯ, ಕವನಾ, ಚಂದುಶ್ರೀ, ರಾಕೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net