ಮೈಸೂರು-ಮಂಗಳೂರು ವಿಮಾನ ಸಂಚಾರ ಮತ್ತೆ ವಿಳಂಬ

airlines2
Published on

ಮೈಸೂರು: ಬಹುಬೇಡಿಕೆಯ ಮೈಸೂರು-ಮಂಗಳೂರು ವಿಮಾನ ಸಂಚಾರ ಮತ್ತೆ ವಿಳಂಬವಾಗಿದೆ.
ಉಡಾನ್ ಯೋಜನೆಯಡಿ ಏರ್ ಇಂಡಿಯಾ ಸಂಸ್ಥೆ ಉಭಯ ನಗರ ನಡುವೆ ವಿಮಾನಯಾನ ಸೇವೆ ಆರಂಭಿಸಲು ಈಗಾಗಲೇ ನಿರ್ಧರಿಸಲಾಗಿದೆ. ಇದಕ್ಕೆ ಅ.25ರಿಂದಲೇ ಚಾಲನೆ ದೊರೆಯಬೇಕಿತ್ತು. ತಾಂತ್ರಿಕ ಕಾರಣದಿಂದ ವಿಳಂಬವಾಗಿದೆ. ಈ ಮಾರ್ಗದಲ್ಲಿ ಸಂಚಾರಕ್ಕೆ ಅನುಮೋದನೆ ಸಿಕ್ಕಿಲ್ಲ. ಜತೆಗೆ, ಸಂಚಾರ ಸೇವೆ ಉದ್ಘಾಟನಾ ದಿನಾಂಕವೂ ನಿಗದಿಯಾಗಿಲ್ಲ. ಈ ಕುರಿತು ಸಲ್ಲಿಸಿರುವ ಪ್ರಸ್ತಾವನೆ ಈ ವರೆಗೆ ಒಪ್ಪಿಗೆ ದೊರೆತಿಲ್ಲ. ಇದಕ್ಕಾಗಿ ಕಾಯಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net