ಮೈಸೂರು ನೂತನ ಎಸಿಯಾಗಿ ಕೆ.ಆರ್. ರಕ್ಷಿತ್

K R Rakshith
Published on

ಮೈಸೂರು: ಮೈಸೂರು ಉಪವಿಭಾಗಾಧಿಕಾರಿಯಾಗಿ ಕೆ.ಆರ್.ರಕ್ಷಿತ್ ಶುಕ್ರವಾರ ಅಧಿಕಾರ ಸ್ವೀಕರಿಸಿದರು.
ಉಪ ವಿಭಾಗಾಧಿಕಾರಿಯಾಗಿದ್ದ ಕಮಲಾಬಾಯಿ ಬೆಂಗಳೂರಿನ ಕೆಎಸ್‌ಟಿಡಿಸಿ ಪ್ರಧಾನ ವ್ಯವಸ್ಥಾಪಕರನ್ನಾಗಿ ಸರ್ಕಾರ ನೇಮಿಸಿ ವರ್ಗಾವಣೆ ಮಾಡಿದೆ. ಚುನಾವಣೆ ಹಿನ್ನ್ನೆಲೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿದ್ದ ರಕ್ಷಿತ್ ಅವರನ್ನು ಬೆಂಗಳೂರು ಬಿಬಿಎಂಪಿ ಶಿಷ್ಟಾಚಾರ ಸಹಾಯಕ ಆಯುಕ್ತರನ್ನಾಗಿ ನಿಯುಕ್ತಿಗೊಳಿಸಿದೆ. ಅಲ್ಲದೆ ಪ್ರಭಾರವಾಗಿ ಉಪ ವಿಭಾಗಾಧಿಕಾರಿ ಜವಾಬ್ದಾರಿಯನ್ನೂ ವಹಿಸಿ ಆದೇಶಿಸಲಾಗಿದೆ. ರಕ್ಷಿತ್ ಈ ಹಿಂದೆ ಮೈಸೂರು ತಹಸೀಲ್ದಾರ್ ಆಗಿ ಕಾರ್ಯ ನಿರ್ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net