ಮೈಸೂರು ನಗರದಲ್ಲಿ ಸೆ.14 ರಂದು ವಿದ್ಯುತ್ ವ್ಯತ್ಯಯ

Power cuts
Published on

ಮೈಸೂರು: ದೇವನೂರು ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ಅವಧಿಯ ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ನಗರದ ವಿವಿಧೆಡೆ ಸೆ.14 ರಂದು ಬೆಳಗ್ಗೆ 10 ರಿಂದ ಸಂಜೆ 5.30ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಮಹದೇವಪುರ ಮುಖ್ಯ ರಸ್ತೆ, ಬೀಡಿ ಕಾಲೋನಿ, ಶಾಂತಿನಗರ, ಕೆ.ಎಂ ಹುಂಡಿ, ನೆಹರು ನಗರ, ಡಿಟಿಎಸ್ ರಾವ್ ನಗರ, ಹಂಚ್ಯಾ ಗ್ರಾಮ, ಸಾತಗಳ್ಳಿ ಗ್ರಾಮ, ಸಾತಗಳ್ಳಿ ಎ ಮತ್ತು ಬಿ ವಲಯ, ದೇವನೂರು ಎ ಮತ್ತು ಬಿ ವಲಯ, ರಾಜೀವ್‌ನಗರ 1ನೇ, 2ನೇ ಮತ್ತು 3ನೇ ಹಂತ, ಹುಡ್ಕೋ ಬಡಾವಣೆ, ಮಾದೇಗೌಡ ವೃತ್ತ, ಲಿಡ್ಕರ್ ಕಾಲೋನಿ, ಕೆಎಸ್‌ಎಫ್‌ಸಿ ಬಡಾವಣೆ, ಕೈಫ್ ಮಸೀದಿ, ಕಾವೇರಿ ಬಡಾವಣೆ, ಸನ್‌ಪ್ಯೂರ್ ಬಡಾವಣೆ, ವಿಟಿಯು ಕಾಲೇಜು, ರಾಜ್‌ಕುಮಾರ್ ರಸ್ತೆ, ಟೀರ್ಸ್‌ ಬಡಾವಣೆ, ಜೆಎಸ್‌ಎಸ್ ಬಡಾವಣೆ, ಕಲ್ಯಾಣಗಿರಿ, ಮಾನಸೀನಗರ, ವಿದ್ಯಾಶಂಕರ ಬಡಾವಣೆ, ಬನ್ನೂರು ರಸ್ತೆ, ವಿದ್ಯಾವಿಕಾಸ್ ಕಾಲೇಜು ಹಾಗೂ ಸುತ್ತ-ಮುತ್ತಲಿನ ಪ್ರದೇಶ ಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net