ಮೈಸೂರು ದಸರಾದಲ್ಲಿ ಕಾಫಿನಾಡಿನ ಭದ್ರಬಾಲ್ಯ ಸ್ತಬ್ದಚಿತ್ರ

3 ckm 2
ಮೈಸೂರು ದಸರಾದಲ್ಲಿ ಪ್ರದರ್ಶನಗೊಂಡ ಚಿಕ್ಕಮಗಳೂರು ಜಿಪಂನ ಭದ್ರಬಾಲ್ಯ ಸ್ತಬ್ಧ ಚಿತ್ರ.
Published on

ಚಿಕ್ಕಮಗಳೂರು: ಮೈಸೂರು ವಿಶ್ವವಿಖ್ಯಾತ ದಸರಾ ಮಹೋತ್ಸವದಲ್ಲಿ ೨೦೨೫ ನೇ ಸಾಲಿನ ಸ್ತಬ್ದಚಿತ್ರ ಪ್ರದರ್ಶನ ಏರ್ಪಡಿಸಿದ್ದು, ಈ ಪ್ರದರ್ಶನದಲ್ಲಿ ಜಿಲ್ಲೆಯ ಭದ್ರಬಾಲ್ಯ ಸ್ತಬ್ದಚಿತ್ರ ನೋಡುಗರ ನಿಬ್ಬೆರಗಾಗುವಂತೆ ಮಾಡಿತು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನ ತಿಳಿಸಿದರು.

ನಗರದ ಜಿಪಂ ಮಿನಿ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಬಾಲ್ಯವಿವಾಹ, ಬಾಲ ಗರ್ಭಿಣಿ, ಪೋಕ್ಸೋ ಪ್ರಕರಣ ತಡೆಗೆ ಭದ್ರಬಾಲ್ಯ ಯೋಜನೆ ಜಿಲ್ಲೆಯ ಜಿಪಂನಲ್ಲಿ ಜಾರಿಗೆ ಬಂದಿದೆ. ಇದರಲ್ಲಿ ವಿವಿಧ ೨೦ ಇಲಾಖೆಗಳು ಸೇರಿ ಕಾರ್ಯಾಚರಣೆ ಮಾಡುತ್ತಿವೆ ಎಂದರು.

ಜಿಲ್ಲಾಡಳಿತ, ಜಿಪಂ, ಪೊಲೀಸ್ ಇಲಾಖೆ ಸಹಯೋಗದ ಜೊತೆಗೆ ಶಾಲಾ ಶಿಕ್ಷಣ ಇಲಾಖೆಯಡಿ ೧೭ ಅಂಶದ ಕಾರ್ಯಕ್ರಮಗಳಾದ ಕನಸಿನ ಗೋಡೆ, ವಿಶ್ವಾಸ ಪೆಟ್ಟಿಗೆ, ತಿಳಿನಲಿ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ ಎಂದು ಹೇಳಿದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಕ್ಕಳ ಮತ್ತು ಮಹಿಳಾ ಹಕ್ಕುಗಳ ಕಾವಲು ಸಮಿತಿಯವರಿಗೆ ಕರ್ನಾಟಕ ಹೆಲ್ತ್ ಟ್ರಸ್ಟ್ ಮೂಲಕ ತರಬೇತಿ ನೀಡಲಾಗಿದ್ದು, ಇವರು ಗ್ರಾಮೀಣ ಜನರಲ್ಲಿ ಕಾನೂನುಗಳ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ ಎಂದರು.

ಇವೆಲ್ಲಾ ಅಂಶಗಳನ್ನೊಳಗೊAಡ ಸ್ತಬ್ದಚಿತ್ರ ಪ್ರದರ್ಶನಕ್ಕೆ ಅವಕಾಶ ಮೈಸೂರು ದಸರಾದಲ್ಲಿ ಲಭ್ಯವಾಯಿತು. ಈ ಸ್ತಬ್ದಚಿತ್ರಕ್ಕೆ ಒಳ್ಳೆಯ ಗೌರವ ಸಿಕ್ಕಿದೆ. ಬಹುಮಾನ ಬರುವ ನಿರೀಕ್ಷೆಯಲ್ಲಿz್ದೆÃವೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net