ಮೈಸೂರು ಕಾರ್ಯಕ್ರಮದ ನೇರಪ್ರಸಾರ

web5
ಹಿರೇಬಾಗೇವಾಡಿಯಲ್ಲಿ ಗೃಹಲಕ್ಷ್ಮೀ ಯೋಜನೆಗೆ ಸ್ಮಿತಾ ಪಾಟೀಲ ಮತ್ತು ಹರ್ಷಲ ಭೋಯರ್ ಚಾಲನೆ ನೀಡಿದರು. ಬಸವರಾಜ ಅಡವಿಮಠ, ರಾಜೇಶ ದಾನವಾಡಕರ, ಗಣೇಶ ಕೆ.ಎನ್, ಶ್ರವಣಕುಮಾರ ನಾಯಕ, ಬಸವರಾಜ ನಾಗರಾಳ ಇತರರು ಇದ್ದರು.
Published on

ಹಿರೇಬಾಗೇವಾಡಿ; ಇಲ್ಲಿಯ ಶಿವಬಸವ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಗೃಹಲಕ್ಷ್ಮೀ ಯೋಜನೆಗೆ ಗ್ರಾಪಂ ಅಧ್ಯಕ್ಷೆ ಸ್ಮಿತಾ ಪಾಟೀಲ ಮತ್ತು ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಹರ್ಷಲ ಭೋಯರ್ ಬುಧವಾರ ಚಾಲನೆ ನೀಡಿದರು.

ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗೃಹಲಕ್ಷ್ಮೀ ಯೋಜನೆ ಲೋಕಾರ್ಪಣೆಗೊಳಿಸುವ ಕಾರ್ಯಕ್ರಮದ ನೇರ ಪ್ರಸಾರ ವೀಕ್ಷಿಸಲು ಇಲ್ಲಿ ಡಿಜಿಟಲ್ ಪರದೆ ಅಳವಡಿಸಲಾಗಿತ್ತು.

ಸುಮಾರು ಎರಡು ಸಾವಿರಕ್ಕೂ ಹೆಚ್ಚು ಮಹಿಳೆೆಯರು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಉಪಕಾರ್ಯದರ್ಶಿ ಬಸವರಾಜ ಅಡವಿಮಠ, ತಾಪಂ ಇಒ ರಾಜೇಶ ದಾನವಾಡಕರ, ಸಹಾಯಕ ನಿರ್ದೇಶಕ ಗಣೇಶ ಕೆ.ಎನ್, ಉಪ ವಿಭಾಗಾಧಿಕಾರಿ ಶ್ರವಣಕುಮಾರ ನಾಯಕ, ತಹಸೀಲ್ದಾರ್ ಬಸವರಾಜ ನಾಗರಾಳ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ನಾಗರಾಜು ಆರ್, ನಿರೂಪಣಾ ಅಧಿಕಾರಿ ರೇವತಿ ಹಿರೇಮಠ, ಸುಮಿತ್ರಾ ಡಿ.ಬಿ, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತ ಸುಭಾಷ ನಾಯಕ, ಗ್ರಾಪಂ ಉಪಾಧ್ಯಕ್ಷೆ ಪುಷ್ಪಾವತಿ ನಾಯ್ಕರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಸಿ. ಪಾಟೀಲ, ಕೆಪಿಸಿಸಿ ಸದಸ್ಯ ಸುರೇಶ ಇಟಗಿ, ಶ್ರೀಕಾಂತ ಮಾದುಭರಮಣ್ಣವರ, ಅಡಿವೇಶ ಇಟಗಿ, ಪಿಡಿಒ ಪ್ರಶಾಂತ ಮುನವಳ್ಳಿ, ಕಾರ್ಯದರ್ಶಿ ಶಂಕರ ತಳವಾರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net