ಮೈಸೂರು ಆಶ್ರಮಕ್ಕೆ ಸ್ವಾಮಿ ಗೌತಮಾನಂದಜಿ ಮಹಾರಾಜ್ ಭೇಟಿ

Published on

ಮೈಸೂರು: ರಾಮಕೃಷ್ಣ ಮಹಾಸಂಘದ ಉಪಾಧ್ಯಕ್ಷರಾದ ಸ್ವಾಮಿ ಗೌತಮಾನಂದಜಿ ಮಹಾರಾಜ್ ಅವರು ಜು.18ರಂದು ಮೈಸೂರಿನ ರಾಮಕೃಷ್ಣ ಆಶ್ರಮಕ್ಕೆ ಭೇಟಿ ನೀಡಲಿದ್ದಾರೆ. ಜು.19 ಮತ್ತು 20ರಂದು ಸಂಜೆ 7.30ರ ಸಂಧ್ಯಾರತಿ ಬಳಿಕ ಭಕ್ತರು ಅವರನ್ನು ಭೇಟಿ ಮಾಡಬಹುದು. ಜು.20 ರಂದು ಸಂಜೆ 6 ಗಂಟೆಗೆ ಆಶ್ರಮದ ಸಭಾಂಗಣದಲ್ಲಿ ಸ್ವಾಮೀಜಿ ವಿಶೇಷ ಆಶೀರ್ವಚನ ನೀಡಲಿದ್ದಾರೆ ಎಂದು ಮೈಸೂರು ಆಶ್ರಮದ ಅಧ್ಯಕ್ಷರಾದ ಸ್ವಾಮಿ ಮುಕ್ತಿದಾನಂದಜಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net