ಮೈಸೂರಿನಲ್ಲಿ ವರ್ಷಧಾರೆ

DSC_5238
Published on

ಮೈಸೂರು: ಮುಂಗಾರು ಆರಂಭವಾಗಿ ಹದಿನೈದು ದಿನಗಳ ಬಳಿಕ ಬುಧವಾರ ನಗರದಲ್ಲಿ ಎರಡು ಗಂಟೆ ಕಾಲ ಸುರಿಯಿತು.
ಇದ್ದಕ್ಕಿದ್ದಂತೆ ಸುರಿದ ಭಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿತು. ನಗರದ ಕೆ.ಆರ್. ವೃತ್ತ, ದೊಡ್ಡಗಡಿಯಾರ, ಗ್ರಾಮಾಂತರ ಬಸ್ ನಿಲ್ದಾಣ, ಅಗ್ರಹಾರ ಸೇರಿದಂತೆ ವಿವಿಧ ಭಾಗಗಳಲ್ಲಿ ಮಳೆ ನೀರಿನಿಂದ ಚರಂಡಿ ತುಂಬಿ ರಸ್ತೆಯಲ್ಲಿ ಹರಿದ ಪರಿಣಾಮ ವಾಹನ ಸಂಚಾರಕ್ಕೆ ತೊಡಕಾಯಿತು. ಮಳೆಯಿಂದ ಯಾವುದೇ ಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ.
ಮುಂಗಾರು ಹಂಗಾಮಿನಲ್ಲಿ ವಿವಿಧ ಬೆಳೆ ಬಿತ್ತಿದ್ದು, ಮಳೆ ಬಾರದ ಹಿನ್ನೆಲೆ ಕಂಗಾಲಾಗಿದ್ದ ರೈತರು ನಿಟ್ಟುಸಿರುಬಿಟ್ಟರು. ಜೋಳ, ಹತ್ತಿ, ತಂಬಾಕು, ದ್ವಿದಳ ಧಾನ್ಯ ಸೇರಿದಂತೆ ಹಲವು ಬೆಳೆ ಹೊಲಗಳಲ್ಲಿಯೇ ಒಣಗಿತ್ತು. ಬುಧವಾರ ಮುಂಜಾನೆಯಿಂದಲೇ ಮೋಡ ಕವಿದ ವಾತಾವರಣದಿಂದ ಕೂಡಿದ್ದು, ಮಧ್ಯಾಹ್ನದ ವೇಳೆಗೆ ಜೋರು ಮಳೆ ಆರಂಭವಾಯಿತು. ಸಂಜೆವರೆಗೂ ಜಿಟಿ ಜಿಟಿ ಮಳೆ ಮುಂದುವರಿಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net