

ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಶನಿವಾರ ನಗರದಲ್ಲಿ ಆರಂಭವಾಗಿದ್ದು, ಭಾನುವಾರವೂ ನಡೆಯಲಿದೆ.
ನಗರದ ಶಾರದಾ ವಿಲಾಸ, ಬನ್ನಿಮಂಟಪದ ಸಂತ ಫಿಲೋಮಿನಾ, ಡಿ.ಬನುಮಯ್ಯ, ಟೆರೆಷಿಯನ್, ಊಟಿ ರಸ್ತೆ ಜೆಎಸ್‌ಎಸ್, ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ, ಮಹಾರಾಜ, ಮರಿಮಲ್ಲಪ್ಪ ಶಾಲೆ ಸೇರಿದಂತೆ 29 ಪರೀಕ್ಷಾ ಕೇಂದ್ರಗಳಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವತಿಯಿಂದ ಸುಸೂತ್ರವಾಗಿ ಸಿಇಟಿ ಪರೀಕ್ಷೆ ನಡೆಯಿತು.
12,455 ಅಭ್ಯರ್ಥಿಗಳು ಈ ಪರೀಕ್ಷೆಗಾಗಿ ನೋಂದಣಿ ಮಾಡಿಕೊಂಡಿದ್ದಾರೆ. ಮೊದಲ ದಿನ ಜೀವವಿಜ್ಞಾನ, ಗಣಿತ ಪರೀಕ್ಷೆ ನಡೆಯಿತು. ಭಾನುವಾರ ಭೌತವಿಜ್ಞಾನ, ರಸಾಯನಶಾಸ್ತ್ರ ಪರೀಕ್ಷೆ ಇರಲಿದೆ. ಇಂಜಿನಿಯರಿಂಗ್, ಕೃಷಿ ವಿಜ್ಞಾನ, ವೆಟರ್ನರಿ, ಫಾರ್ಮಸಿ, ನ್ಯಾಚುರೋಪಥಿ, ಯೋಗ ಹಾಗೂ ಬಿಎಸ್ಸಿ ನರ್ಸಿಂಗ್ ಕೋರ್ಸ್‌ಗಳಿಗೆ ನಡೆಯುವ ಪ್ರವೇಶಾತಿ ಪರೀಕ್ಷೆ ಇದಾಗಿದೆ.
ಪರೀಕ್ಷಾ ಕೇಂದ್ರದ ಸುತ್ತ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ಎಲೆಕ್ಟ್ರಾನಿಕ್ ಉಪಕರಣಗಳು, ಗ್ಯಾಜೆಟ್‌ಗಳು, ಪೇಜರ್‌ಗಳು, ಮೊಬೈಲ್ ಫೋನ್‌ಗಳು ಮತ್ತು ಬ್ಲೂಟೂತ್ ಅಥವಾ ವೈರ್‌ಲೆಸ್ ಸಾಧನಗಳು, ಕ್ಯಾಲ್ಕುಲೇಟರ್‌ಗಳು, ಕೈಗಡಿಯಾರಗಳು, ಆಭರಣ ತೆಗೆದುಕೊಂಡು ಹೋಗುವುದನ್ನು ನಿರ್ಬಂಧಿಸಲಾಗಿತ್ತು.