ಮೈಸೂರಿನಲ್ಲಿ ಮೇ 4 ರಿಂದ 7ರವರೆಗೆ ಮಳೆ ಸಾಧ್ಯತೆ : ಹವಾಮಾನ ಇಲಾಖೆ ಮುನ್ಸೂಚನೆ

Rain in mysore
Published on

ಮೈಸೂರು: ಜಿಲ್ಲೆಯಲ್ಲಿ ಈ ಬಾರಿ ಪೂರ್ವ ಮುಂಗಾರು ಆಶಾದಾಯಕವಾಗಿದ್ದು, ಮೇ 4 ರಿಂದ 7ರವರೆಗೆ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಜಿಲ್ಲೆಯಲ್ಲಿ ಮೇ 4 ರಂದು 16 ಮಿ.ಮೀ., 5 ರಂದು 2 ಮಿ.ಮೀ., 6 ರಂದು 5 ಮಿ.ಮೀ., 7 ರಂದು 16 ಮಿ.ಮೀ. ಮಳೆಯಾಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ಕನಿಷ್ಠ 22, ಗರಿಷ್ಠ 34 ಡಿಗ್ರಿ ಸೆಲ್ಸಿಯಸ್ ತಾಪಮಾನ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯ ನಾಗನಹಳ್ಳಿಯ ಗ್ರಾಮೀಣ ಕೃಷಿ ಹವಾಮಾನ ಸೇವಾ ವಿಭಾಗದ ಹಿರಿಯ ಅಧೀಕ್ಷಕ ಡಾ.ಸಿ. ರಾಮಚಂದ್ರ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತಾಲೂಕುವಾರು ವಿವರ: ಎಚ್.ಡಿ.ಕೋಟೆ ತಾಲೂಕಿನಲ್ಲಿ ಮೇ 4 ರಂದು 4.9 ಮಿ.ಮೀ., 5 ರಂದು 1.4 ಮಿ.ಮೀ., 6 ರಂದು 1.7 ಮಿ.ಮೀ., 7 ರಂದು 3.5 ಮಿ.ಮೀ., ಹುಣಸೂರಿನಲ್ಲಿ ಮೇ.4 ರಂದು 7.2 ಮಿ.ಮೀ., 5 ರಂದು 2.5 ಮಿ.ಮೀ., 6 ರಂದು 1.1 ಮಿ.ಮೀ., 7 ರಂದು 4.5 ಮಿ.ಮೀ., ಕೆ.ಆರ್. ನಗರದಲ್ಲಿ ಮೇ 4 ರಂದು 8.1 ಮಿ.ಮೀ., 5 ರಂದು 1.1 ಮಿ.ಮೀ., 6 ರಂದು 0.8 ಮಿ.ಮೀ., 7 ರಂದು 4.6 ಮಿ.ಮೀ., ಮೈಸೂರಿನಲ್ಲಿ ಮೇ 4 ರಂದು 12.7 ಮಿ.ಮೀ., 5 ರಂದು 2.5 ಮಿ.ಮೀ., 6 ರಂದು 2.2 ಮಿ.ಮೀ., 7 ರಂದು 5.5 ಮಿ.ಮೀ., ನಂಜನಗೂಡಿನಲ್ಲಿ ಮೇ 4 ರಂದು 12.2 ಮಿ.ಮೀ., 5 ರಂದು 2.2 ಮಿ.ಮೀ., 6 ರಂದು 0.8 ಮಿ.ಮೀ., 7 ರಂದು 2.2 ಮಿ.ಮೀ., ಪಿರಿಯಾಪಟ್ಟಣದಲ್ಲಿ ಮೇ 4 ರಂದು 7.8 ಮಿ.ಮೀ., 5 ರಂದು 1.6 ಮಿ.ಮೀ., 6 ರಂದು 1.9 ಮಿ.ಮಿ., 7 ರಂದು 3.6 ಮಿ.ಮೀ., ತಿ.ನರಸೀಪುರದಲ್ಲಿ ಮೇ 4 ರಂದು 6.5 ಮಿ.ಮೀ., 5 ರಂದು 2.4 ಮಿ.ಮೀ., 6 ರಂದು 1.9 ಮಿ.ಮೀ., 7 ರಂದು 2.2 ಮಿ.ಮೀ. ಮಳೆಯಾಗುವ ನಿರೀಕ್ಷೆ ಇದೆ.

ರೈತರಿಗೆ ಸಲಹೆ: ಸಾಧಾರಣ ಮಳೆಯಾಗುವ ನಿರೀಕ್ಷೆ ಇರುವ ಹಿನ್ನೆಲೆಯಲ್ಲಿ ರೈತರು ಶುಷ್ಕ ಅವಧಿಗಳಲ್ಲಿ ಕಳೆ ತೆಗೆಯುವುದು ಮತ್ತು ರಸಗೊಬ್ಬರ ಹಾಕಬೇಕು, ನೀರು ನಿಲ್ಲುವುದನ್ನು ತಪ್ಪಿಸಲು ಭತ್ತ, ತರಕಾರಿ ಮತ್ತು ತೋಟದ ಬೆಳೆಗಳಲ್ಲಿ ಸರಿಯಾದ ಒಳಚರಂಡಿ ಮಾಡಬೇಕು, ಗಾಳಿ ಮತ್ತು ಆರ್ದ್ರ ಮಣ್ಣಿನಿಂದಾಗಿ ನೆಲೆಗೊಳ್ಳುವುದನ್ನು ತಡೆಯಲು ಬಾಳೆ ಗಿಡಗಳಿಗೆ ಆಧಾರಗಳನ್ನು ನೀಡಬೇಕು, ಮಳೆಗೆ ಸ್ವಲ್ಪ ಮೊದಲು ಅಥವಾ ಸಮಯದಲ್ಲಿ ಕೀಟನಾಶಕ ಮತ್ತು ಶಿಲೀಂಧ್ರನಾಶಕ ಸಿಂಪಡಣೆಗಳನ್ನು ತಪ್ಪಿಸಬೇಕು, ಅಗತ್ಯವಿದ್ದರೆ ನಿಯಂತ್ರಣಗಳನ್ನು ಬಳಸಬೇಕು, ಜಾನುವಾರುಗಳಿಗೆ ಶುದ್ಧ ನೀರು, ಒಣ ಹಾಸಿಗೆ ಒದಗಿಸಬೇಕು, ಕೊಳಿ ಶೆಡ್‌ಗಳಲ್ಲಿ ಉತ್ತಮ ಗಾಳಿಯನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net