

ಮೈಸೂರು: ಉತ್ತನಹಳ್ಳಿ ಗ್ರಾಮದ ಜ್ವಾಲಾಮುಖಿ ತ್ರಿಪುರ ಸುಂದರಿ ಅಮ್ಮನವರ ದೇವಾಲಂು ಆವರಣದಲ್ಲಿ ರಾಜ್ಯ ನಾಯಕರ ಹಿತರಕ್ಷಣಾ ವೇದಿಕೆ ವತಿಯಿಂದ ಮೈಸೂರಿನ ದೊರೆ ಮಾರನಾಯಕ ವಿಗ್ರಹಕ್ಕೆ ಗುರುವಾರ ಪುಷ್ಪಾರ್ಚನೆ ಸಲ್ಲಿಸಲಾಯಿತು.
ವೇದಿಕೆ ರಾಜ್ಯಾಧ್ಯಕ್ಷ ದ್ಯಾವಪ್ಪನಾಂುಕ ವಾತನಾಡಿ, ಮೈಸೂರಿನ ಮೂಲನಿವಾಸಿಗಳ ದೊರೆ ಮಾರನಾಯಕ ಹಾಗೂ ಜನಾಂಗದ ಇತರೆ ನಾಯಕರ ಚರಿತ್ರೆಗಳು ಇತಿಹಾಸದ ಪುಟಗಳಲ್ಲಿ ದಾಖಲಾಗಿಲ್ಲ. ಈಗ ಈ ವೀರಗಲ್ಲುಗಳಿಗೆ ನಮಿಸುವ ಮೂಲಕ ಚರಿತ್ರೆಂುನ್ನು ಉಳಿಸುವ ಕೆಲಸ ವಾಡಲಾಗುತ್ತಿದೆ ಎಂದು ಹೇಳಿದರು.
ಮಾರನಾಯಕ ಮೈಸೂರಿನ ಮೂಲ ದೊರೆ ಎಂದೇ ಪ್ರಖ್ಯಾತಿಂಾಗಿದ್ದು, ಅವರ ಪ್ರತಿಮೆಂುನ್ನು ಮುಂದಿನ ದಿನಗಳಲ್ಲಿ ದೇವಸ್ಥಾನ ಸಮೀಪ ನಿರ್ಮಿಸುವುದಕ್ಕೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದು, ಅವರು ನಡೆದು ಬಂದ ದಾರಿ ಬಗ್ಗೆ ಪುಸ್ತಕ ರೂಪದಲ್ಲಿ ಹೊರತರುವುದರ ಮೂಲಕ ಅವರ ಕೊಡುಗೆ ಏನೆಂಬುದನ್ನು ತಿಳಿಸುವ ಕೆಲಸ ವಾಡಲಿದ್ದೇವೆ ಎಂದರು
ಈ ಸಂದರ್ಭದಲ್ಲಿ ಸಮುದಾಯದ ಮುಖಂಡರಾದ ಪ್ರಭಾಕರ್ ಹುಣಸೂರು, ಶಿವಣ್ಣ ಹೊಸರಾಮೇನಹಳ್ಳಿ, ಮಂಜುನಾಥ್, ಮಂಜುನಾಥ್, ಡಾ. ಬಂಡಳ್ಳಿಕುವಾರ್, ವಾದೇಶ್, ಮಣಿ, ರಘು ಹಾಗೂ ಇತರರು ಇದ್ದರು.