ಮೈಸೂರಿನಲ್ಲಿ ಮಹಿಳೆಯ ಸರ ಕಳವು

chain snachar.
Published on

ಮೈಸೂರು: ಹಲವು ದಿನಗಳಿಂದ ಕಡಿಮೆಯಾಗಿದ್ದ ಸರಗಳ್ಳತನ ಮತ್ತೆ ನಗರದಲ್ಲಿ ಶುರುವಾಗಿದ್ದು, ಮಂಗಳವಾರ ಮಹಿಳೆಯ ಸರ ಕಸಿದು ಕಳ್ಳರು ಪರಾರಿಯಾಗಿದ್ದಾರೆ.
ಕೆ.ಸಿ.ಬಡಾವಣೆ 7ನೇ ಕ್ರಾಸ್‌ನ ಭಾರತಿ (58) ಸರ ಕಳೆದುಕೊಂಡವರು. ಬೆಳಗ್ಗೆ ವಾಯು ವಿಹಾರ ಮುಗಿಸಿ ಅಂಗಡಿಯಿಂದ ಹಾಲು ತೆಗೆದುಕೊಂಡು ಮನೆಗೆ ತೆರಳುತ್ತಿದ್ದಾಗ ಬಡಾವಣೆಯ 8ನೇ ಕ್ರಾಸ್‌ನಿಂದ ಬೈಕ್‌ನಲ್ಲಿ ಬಂದ ಇಬ್ಬರು ಮಾತನಾಡಿಸುವಂತೆ ನಟಿಸಿದ್ದಾರೆ. ಬಳಿಕ ಸರ ಕದಿಯಲು ಯತ್ನಿಸಿದಾಗ ಭಾರತಿ ಅವರು ಸರವನ್ನು ಗಟ್ಟಿಯಾಗಿ ಹಿಡಿದಿದ್ದರಿಂದ 50 ಗ್ರಾಂ ಸರದಲ್ಲಿ 17 ಗ್ರಾಂನಷ್ಟು ಸರ ಕಿತ್ತು ಪರಾರಿಯಾಗಿದ್ದಾರೆ. ಕೂಗಿಕೊಂಡು ಸುತ್ತಮುತ್ತಲ ಜನ ಸೇರುವ ವೇಳೆಗೆ ಕಳ್ಳರು ಪರಾರಿಯಾಗಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ನಜರ್‌ಬಾದ್ ಠಾಣೆ ಪೊಲೀಸರು, ಸುತ್ತಲಿನ ಸಿಸಿ ಕ್ಯಾಮರಾಗಳ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿ ಕಳ್ಳರ ಪತ್ತೆಗೆ ಕ್ರಮಕೈಗೊಂಡಿದ್ದಾರೆ.

.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net