ಮೈಸೂರಿನಲ್ಲಿ ಪೂರ್ಣಚಂದ್ರ ತೇಜಸ್ವಿ ಜನ್ಮ ದಿನಾಚರಣೆ

Tejaswi birthday celebration in Mysore
Published on

ಮೈಸೂರು: ರಾಷ್ಟ್ರಕವಿ ಕುವೆಂಪು ಅವರ ತತ್ವಾದರ್ಶಗಳನ್ನು ಅವರ ಪುತ್ರ, ಸಾಹಿತಿ ಪೂರ್ಣಚಂದ್ರ ತೇಜಸ್ವಿ ಸಂಪೂರ್ಣ ಮೈಗೂಡಿಸಿಕೊಂಡು ವಿಶ್ವಮಾನವರಾಗಿ ಪ್ರಜ್ವಲಿಸಿದರು ಎಂದು ಸಾಹಿತಿ ಬನ್ನೂರು ಕೆ.ರಾಜು ಬಣ್ಣಿಸಿದರು.

ನಗರದ ಜಲದರ್ಶಿನಿ ಅತಿಥಿ ಗೃಹ ಆವರಣದಲ್ಲಿ ಪಡುವಾರಹಳ್ಳಿ ಸ್ನೇಹ ಬಳಗ ಏರ್ಪಡಿಸಿದ್ದ ಸಾಹಿತಿ ಕೆ.ಪಿ. ಪೂರ್ಣಚಂದ್ರತೇಜಸ್ವಿ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ತೇಜಸ್ವಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿ, ತೇಜಸ್ವಿ ಅವರು ಸದಾ ನಿಸರ್ಗದಲ್ಲಿ ಸ್ವರ್ಗವನ್ನು ಕಾಣುತ್ತಿದ್ದರು. ಜನಾರಣ್ಯದಿಂದ ದೂರವಿದ್ದು ಕಾಡಿನ ಸಂತನಂತೆ ಬದುಕಿದರು ಎಂದು ಹೇಳಿದರು.

ವಕೀಲ ಪಡುವಾರಹಳ್ಳಿ ಎಂ.ರಾಮಕೃಷ್ಣ, ನಗರ ಪಾಲಿಕೆ ಸದಸ್ಯ ಎಂ.ಚಿಕ್ಕವೆಂಕಟು, ಸಿಟಿ ಕೊಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಎಸ್.ಬಿ. ಶಿವು, ಪಡುವಾರಹಳ್ಳಿ ಸ್ನೇಹ ಬಳಗ ಸದಸ್ಯರಾದ ಎಸ್. ಕೃಷ್ಣಕುಮಾರ್, ಬಿ.ಕುಮಾರ್, ಎಂ.ಶಿವಪ್ರಕಾಶ್, ಸಂತೋಷ್, ಸುರೇಂದ್ರ, ಅಜಯ್ ಶಾಸ್ತ್ರಿ , ಗಿರಿಧರ್ ಹಾಗೂ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net