ಮೈಸೂರಿನಲ್ಲಿ ನೇಗಿಲಯೋಗಿ ಕುಟುಂಬಗಳ ಸಮ್ಮಿಲನ

18
Published on

ಮೈಸೂರು: ನೇಗಿಲಯೋಗಿ ಸಮಾಜಸೇವಾ ಟ್ರಸ್ಟಿನ ಅಂಗಸಂಸ್ಥೆಯಾದ ನೇಗಿಲಯೋಗಿ ಮಹಿಳಾ ಕ್ಷೇಮಾಭಿವೃದ್ಧಿ ಸಂಘದಿಂದ ನಗರದ ಕೆ.ಜಿ. ಕೊಪ್ಪಲಿನ ಮರಳೇಶ್ವರ ಸೇವಾ ಭವನದಲ್ಲಿ ‘ನೇಗಿಲಯೋಗಿ ಕುಟುಂಬಗಳ ಸಮ್ಮಿಲನ’ ಕಾರ್ಯಕ್ರಮ ಇತ್ತೀಚೆಗೆ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಂಗವಾಗಿ ಮಹಿಳೆಯರು, ಪುರುಷರು ಹಾಗೂ ಮಕ್ಕಳಿಗೆ ಪತ್ಯೇಕವಾಗಿ ಸ್ಮರಣ ಶಕ್ತಿ ಸ್ಪರ್ಧೆ, ಸಂಗೀತ ಕುರ್ಚಿ, ಮೂಕಾಭಿನಯ, ವೃತ್ತ ಓಟದ ಗುಂಪು ರಚನೆ ಸ್ಪರ್ಧೆ, ಮೂಕಾಭಿನಯ, ಗಾಯನ ಇನ್ನಿತರ ಮನರಂಜನಾತ್ಮಕ ಮತ್ತು ಕ್ರೀಡಾ ಸ್ಪರ್ಧೆ ಜರುಗಿದವು.
ಕನ್ನಡಪರ ಹೋರಾಟಗಾರ ಎಂ.ಮೋಹನ್‌ಕುಮಾರ್‌ಗೌಡ, ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆಯ ಮಾಜಿ ಅಧ್ಯಕ್ಷ ಕೆ. ವಿವೇಕಾನಂದ, ಶಾಂತವೇರಿ ಗೋಪಾಲಗೌಡ ಆಸ್ಪತ್ರೆಯ ಮುಖ್ಯಸ್ಥ ಡಾ. ಸುಶ್ರೂತ್, ಐಪಿಎಸ್ ಅಧಿಕಾರಿ ಡಾ.ಎ.ಎನ್. ಪ್ರಕಾಶ್‌ಗೌಡ, ದೇವರಾಜ ವಿಭಾಗದ ಎಸಿಪಿ ಶಾಂತಮಲ್ಲಪ್ಪ, ಕೆಎಸ್‌ಆರ್‌ಸಿ ನಿವೃತ್ತ ಘಟಕ ವ್ಯವಸ್ಥಾಪಕ ಲಕ್ಷ್ಮಣ್‌ಗೌಡ, ವಲಯ 55ರ ಸಾರಿಗೆ ಅಧಿಕಾರಿ ಎಲ್ ದೀಪಕ್, ವಸ್ತುಪ್ರದರ್ಶನ ಪ್ರಾಧಿಕಾರದ ಸಿಇಒ ರಾಜೇಶ್‌ಗೌಡ, ನಗರಪಾಲಿಕೆ ಸದಸ್ಯ ಎಂ.ಶಿವಕುಮಾರ್, ಜಿಲ್ಲಾ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಚೇತನ್ ಇತರರನ್ನು ಗೌರವಿಸಲಾಯಿತು.
ಸ್ಪರ್ಧಾ ವಿಜೇತರಿಗೆ ಹಿರಿಯ ವಿಜ್ಞಾನಿ ಡಾ. ಮಹಾದೇವಯ್ಯ, ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ, ಲಯನ್ ಸಂಸ್ಥೆ ಪ್ರಾಂತಪಾಲ ಕೆ. ದೇವೇಗೌಡ ಬಹುಮಾನ ವಿತರಿಸಿದರು.
ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಡಾ.ಎಂ.ಬಿ. ಮಂಜೇಗೌಡ, ನೇಗಿಲಯೋಗಿ ಸಮಾಜಸೇವಾ ಟ್ರಸ್ಟ್ ಅಧ್ಯಕ್ಷ ಡಿ. ರವಿಕುಮಾರ್, ಲೇಖಕರಾದ ಟಿ. ಸತೀಶ್‌ಜವರೇಗೌಡ, ಡಾ.ನೀ.ಗೂ. ರಮೇಶ್, ಮಹಿಳಾ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷೆ ಜೆ. ಶೋಭಾ, ಪ್ರಧಾನ ಕಾರ್ಯದರ್ಶಿ ಮಂಜುಳಾ ಭದ್ರೇಗೌಡ, ಖಜಾಂಚಿ ಸುವರ್ಣಾ ರಾಜ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net