ಮೈಸೂರಿನಲ್ಲಿ ನಾಳೆಯಿಂದ ಕೋವಿಡ್ ಹೊಸ ಮಾರ್ಗಸೂಚಿ ಜಾರಿ

Sindhuri
Published on

ಮೈಸೂರು: ಜಿಲ್ಲೆಯಲ್ಲೂ ಮಂಗಳವಾರದಿಂದ ಕೋವಿಡ್&-19 ರ ಹೊಸ ಮಾರ್ಗಸೂಚಿ ಅನುಷ್ಠಾನಕ್ಕೆ ಬರಲಿದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮದುವೆಗೆ 500 ಜನ, ಶವ ಸಂಸ್ಕಾರಕ್ಕೆ 200ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ. ಮುಂಬರುವ ನಂಜನಗೂಡು ಪಂಚ ಮಹಾರಥೋತ್ಸವಕ್ಕೂಕ ಕರೊನಾ ಗೈಡ್‌ಲೈನ್ ಅನ್ವಯವಾಗಲಿದೆ. ಕರೊನಾ ಸೋಂಕು ನಿಯಂತ್ರಿಸಬೇಕಾದರೆ ಸಾರ್ವಜನಿಕರು ಸರ್ಕಾರದ ನಿಯಮ ಪಾಲಿಸಬೇಕು ಎಂದು ತಿಳಿಸಿದರು.

ಕರೊನಾ ಸೋಂಕು ಹತೋಟಿಗೆ ತರಲು ಜಿಲ್ಲೆಯಾದ್ಯಂತ ಎಲ್ಲಾ ರೀತಿಯ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಸದ್ಯಕ್ಕೆ ಮೈಸೂರು ಜಿಲ್ಲೆಯಲ್ಲಿ ಕರೊನಾ ಸೋಂಕು ಹತೋಟಿಯಲ್ಲಿದೆ. ಕರೊನಾ ಸೋಂಕಿತರ ಸಂಖ್ಯೆಯಲ್ಲಿ ಕೂಡಾ ಇಳಿಕೆಯಾಗಿದೆ. ಜಿಲ್ಲೆಯಲ್ಲಿ ಲಸಿಕೆ ವಿತರಣೆ ಹಾಗೂ ಟೆಸ್ಟಿಂಗ್ ಪ್ರಮಾಣ ಹೆಚ್ಚಳವಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net