ಮೈಸೂರಿನಲ್ಲಿ ಚಿರತೆ ದಾಳಿಗೆ ಕರು ಬಲಿ

Leapord
Published on

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ಇದೀಗ ಚಿರತೆ ಹಾವಳಿ ಪ್ರಾರಂಭಗೊಂಡಿದ್ದು, ಬುಧವಾರ ರಾತ್ರಿ ಜೆಸಿ ಬಡಾವಣೆಯಲ್ಲಿ ಕರುವೊಂದನ್ನು ಚಿರತೆ ಬಲಿ ಪಡೆದಿದೆ.

ಜೆಸಿ ಬಡಾವಣೆ ನಿವಾಸಿ ಪ್ರದೀಪ್ ಅವರಿಗೆ ಸೇರಿದ ಒಂದು ವರ್ಷದ ಕರುವಿನ ಮೇಲೆ ಚಿರತೆ ದಾಳಿ ನಡೆಸಿ ದೇಹದ ಕೆಲವು ಭಾಗವನ್ನು ತಿಂದು ತೆರಳಿದೆ. ಕರುವನ್ನು ಕಟ್ಟಿಹಾಕಿದ ಹಿನ್ನೆಲೆಯಲ್ಲಿ ಚಿರತೆಗೆ ಹೊತ್ತೊಯ್ಯಲು ಸಾಧ್ಯವಾಗಲಿಲ್ಲ. ಸ್ಥಳಕ್ಕೆ ಶಾಸಕ ಎಸ್.ಎ. ರಾಮದಾಸ್, ಡಿಸಿಎಫ್ ಡಾ.ಕೆ.ಎಂ. ಬಸವರಾಜ್ ಭೇಟಿ ನೀಡಿದರು. ಚಿರತೆ ಸೆರೆಗೆ ಬೋನು ಇರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net