ಮೈಸೂರಿನಲ್ಲಿ ಗುಡ್‌ಪ್ರೈಡೇ ಆಚರಣೆ

mysore
Published on

ಮೈಸೂರು: ಯೇಸು ಕ್ರಿಸ್ತನನ್ನು ಶಿಲುಬೆಗೇರಿಸಿದ ದಿನವಾದ ‘ಗುಡ್‌ಪ್ರೈಡೇ’ಯನ್ನು ಶುಕ್ರವಾರ ನಗರದಲ್ಲಿ ಆಚರಣೆ ಮಾಡಲಾಯಿತು.

ಯೇಸುವಿನ ತ್ಯಾಗವನ್ನು ಸ್ಮರಣೆ ಮಾಡಿಕೊಳ್ಳುವ ಮೂಲಕ ಪ್ರಾರ್ಥನೆ ಮಾಡಲಾಯಿತು. ಸ್ನೇಹಿತರು ಮತ್ತು ಕುಟುಂಬದವರು ಪರಸ್ಪರ ಶುಭಾಶಯಗಳು ವಿನಿಮಯ ಮಾಡಿಕೊಂಡರು.

ಕ್ಷಮೆ, ತ್ಯಾಗ, ಕರುಣೆ, ಮಾನವೀಯತೆಗಳ ಸಂಕೇತವಾಗಿರುವ ಗುಡ್ ಪ್ರೈಡೇ ಅಂಗವಾಗಿ ಐತಿಹಾಸಿಕ ಸಂತ ಫಿಲೋಮಿನಾ ಚರ್ಚ್‌ನಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು.

ಇದರೊಂದಿಗೆ ಸಂತ ಬಾರ್ಥಲೋಮಿಯೊ ಚರ್ಚ್, ಹಿನಕಲ್‌ನ ಇನ್ಫೆಂಟ್ ಜೀಸಸ್ ಚರ್ಚ್, ಲಕ್ಷ್ಮೀಪುರಂನ ಹಾರ್ಡ್ವಿಕ್ ಚರ್ಚ್, ವೆಸ್ಲಿ ಚರ್ಚ್, ಗಾಂಧಿನಗರದ ಚರ್ಚ್ ಸೇರಿದಂತೆ ನಗರದ ಎಲ್ಲ ಕ್ರೈಸ್ತ ದೇವಾಲಯಗಳಲ್ಲೂ ಭಕ್ತಿಭಾವದಿಂದ ಯೇಸು ಕ್ರಿಸ್ತರ ಸ್ಮರಣೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net