

ಮೈಸೂರು: ಸೇವಾ ಚಿಲುಮೆ ಚಾರಿಟಬಲ್ ಟ್ರಸ್ಟ್‌ನಿಂದ ಉದ್ಯೋಗ ಮೇಳವನ್ನು ಸೆ.3ರಂದು ಬೆಳಗ್ಗೆ 9ಕ್ಕೆ ರಾಜೇಂದ್ರನಗರದ ಕೆಪಿಟಿಸಿಎಲ್ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಎಸ್ಸೆಸ್ಸೆಲ್ಸಿ, ಪಿಯುಸಿ, ಐಟಿಐ, ಡಿಪ್ಲೊಮಾ, ಪದವಿ ವಿದ್ಯಾರ್ಥಿಗಳು ಮೇಳದ ಲಾಭ ಪಡೆದುಕೊಳ್ಳಬಹುದು. ನಿರುದ್ಯೋಗಿಗಳು ಉದ್ಯೋಗ ಕಂಡುಕೊಳ್ಳಲು ನೆರವಾಗುವ ಉದ್ದೇಶದಿಂದ ಮೇಳ ನಡೆಸಲಾಗುತ್ತಿದೆ. 45 ವಿವಿಧ ಕಂಪನಿಗಳು ಪಾಲ್ಗೊಳ್ಳಲಿವೆ ಎಂದು ಟ್ರಸ್ಟ ಅಧ್ಯಕ್ಷ ಕಾರ್ತಿಕ್ ಮರಿಯಪ್ಪ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.