ಮೈಸೂರಿನಲ್ಲಿ ಉದ್ಘಾಟನೆಗೆ ಸಜ್ಜಾಗುತ್ತಿದೆ ‘ಯುದ್ಧ ಸ್ಮಾರಕ’

mysore
Published on

ಮಂಜುನಾಥ ತಿಮ್ಮಯ್ಯ ಮೈಸೂರು

ನಗರದ ಹಳೇ ಜಿಲ್ಲಾಧಿಕಾರಿ ಕಚೇರಿ ಸಮೀಪ ಎನ್‌ಸಿಸಿ ಮೈದಾನದಲ್ಲಿ 1.47 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸುತ್ತಿರುವ ‘ಯುದ್ಧ ಸ್ಮಾರಕ’ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದೆ.

ಕೊನೆಯ ಹಂತದ ಕೆಲಸ ಚುರುಕಿನಿಂದ ನಡೆಯುತ್ತಿದೆ.  ಶ್ರೀಘದಲ್ಲೇ ಇದು ನಗರದ ಆಕರ್ಷಣೀಯ ಕೇಂದ್ರವಾಗಲಿದ್ದು, ಮೈಸೂರಿಗೆ ಮತ್ತೊಂದು ಪ್ರವಾಸಿ ತಾಣ ದೊರೆಯಲಿದೆ.

ಸ್ಮಾರಕಕ್ಕಾಗಿ ಚಾಮರಾಜನಗರ ಹಾಗೂ ಹಾಸನದಿಂದ ದಾನವಾಗಿ ಪಡೆದಿರುವ ಉತ್ಕೃಷ್ಟ ಕಪ್ಪುಶಿಲೆಯನ್ನು ಬಳಕೆ ವಾಡಲಾಗುತ್ತಿದೆ. ಈ ಶಿಲೆಯ ಆರು ಬಹತ್ ಕಂಬಗಳನ್ನು ಮೈದಾನದಲ್ಲಿ ಈಗಾಗಲೇ ಪ್ರತ್ಯೇಕವಾಗಿ ಕೆತ್ತನೆ ವಾಡಲಾಗಿದೆ.

ಇತ್ತೀಚೆಗೆ ಬಹತ್ ಸಾಮರ್ಥ್ಯದ ಕ್ರೇನ್ ಬಳಸಿ, ಸ್ಮಾರಕದ ತಳಪಾಯದ ಮೇಲೆ ಆಕಾರಕ್ಕೆ ತಕ್ಕಂತೆ ಕಂಬಗಳನ್ನು ಜೋಡಣೆ ವಾಡಲಾಗಿದೆ. ಇದೀಗ ಕಂಬಗಳಿಗೆ ಅಂತಿಮ ಹಂತದ ಹೊಳಪು ನೀಡುವ ಕಾರ್ಯ ಭರದಿಂದ ಸಾಗಿದೆ. ಶೀಘ್ರದಲ್ಲೇ ಉದ್ಘಾಟನೆಗೆ ಸ್ಮಾರಕ ಸಿದ್ಧಗೊಳ್ಳುತ್ತಿದೆ.

ಗೋಪುರ ವಾದರಿಯಲ್ಲಿ ಜೋಡಣೆ ವಾಡಲಾಗಿರುವ ಸ್ಲಾೃಬ್‌ಗಳಿಗೆ ಪಾಲಿಶ್ ವಾಡಿದ ನಂತರ ಬುನಾದಿ ಸುತ್ತಲೂ ಪಾರಂಪರಿಕ ಸ್ಪರ್ಶ ನೀಡಲಾಗುತ್ತದೆ. ಅದಕ್ಕಾಗಿ ಹಸಿರು ಕಲ್ಲನ್ನು ಜೋಡಣೆ ವಾಡಲಾಗುತ್ತದೆ. ಬಳಿಕ ಸ್ಮಾರಕದ ಕಂಬಗಳಿಗೆ ಅಂತಿಮ ರೂಪ ನೀಡಿ, ಸುವರ್ಣ ಬಣ್ಣದಲ್ಲಿ ಅಕ್ಷರ ಕೆತ್ತನೆ ವಾಡಲಾಗುತ್ತದೆ.

ಸ್ಮಾರಕದಲ್ಲಿ ಏನು ಇರಲಿದೆ...?

ಯುದ್ಧ ಸ್ಮಾರಕವು 4 ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ. 33 ಅಡಿ ಎತ್ತರ ಸ್ತಂಭ ರಾಷ್ಟ್ರ ಲಾಂಛನ ಇರಲಿದೆ. ಭೂಸೇನೆ, ವಾಯುಸೇನೆ, ನೌಕಾ ಪಡೆಯ ಲೋಗೊ ಇರಲಿದೆ. ಚೌಕಾಕಾರದಲ್ಲಿ ನಿರ್ಮಿಸಲಾಗುತ್ತಿರುವ ಸ್ಮಾರಕದಲ್ಲಿ ಭೂ ಸೇನೆ, ವಾಯು ಸೇನೆ, ನೌಕಾದಳ ಅರೆಸೇನಾ ಪಡೆಯ ಮಹತ್ವ ಸಾರುವ ಯುದ್ಧ ಟ್ಯಾಂಕರ್‌ಗಳು, ಯುದ್ಧ ವಿವಾನಗಳು, ನೌಕೆ, ಗನ್ ಸೇರಿದಂತೆ ಸಮರದಲ್ಲಿ ಬಳಸುವ ಪರಿಕರಗಳು ಇರಲಿವೆ.

ಅದಕ್ಕಾಗಿ ರಕ್ಷಣಾ ಸಚಿವಾಲಯದ ಸೇನಾ ಪ್ರಧಾನ ಕಚೇರಿಯೊಂದಿಗೆ ಕನ್ನಡ ಮತ್ತು ಸಂಸ್ಕತಿ ಇಲಾಖೆಯು ಪತ್ರ ವ್ಯವಹಾರ ನಡೆಸಿದೆ. ಕಾಪ್ಟರ್ ನೌಕೆ ಟ್ಯಾಂಕ್ ಜತೆಗೆ ರೈಫೆಲ್ ಹೆಲ್ಮೆಟ್ ನೀಡುವಂತೆ ಕೇಂದ್ರ ರಕ್ಷಣಾ ಸಚಿವಾಲಯದ ಸೇನಾ ಕಚೇರಿಗೆ ಕೇಳಲಾಗಿದೆ. ಅದಕ್ಕೆ ರಕ್ಷಣಾ ಸಚಿವಾಲಯ ವತಿಯಿಂದ ಹಸಿರು ನಿಶಾನೆ ದೊರೆತಿದೆ.

ಸಾಗಣೆ ಹಾಗೂ ವಿವಿಧ ವೆಚ್ಚವನ್ನು ಕನ್ನಡ ಮತ್ತು ಸಂಸ್ಕತಿ ಇಲಾಖೆ ಭರಿಸಬೇಕಿದೆ. ಸ್ಮಾರಕ ನಿರ್ವಾಣ ಕಾರ್ಯ ಪೂರ್ಣಗೊಂಡ ಬಳಿಕ ಬಳಸಲ್ಪಟ್ಟ ಯುದ್ಧ ಟ್ಯಾಂಕರ್, ಗನ್ ಹಾಗೂ ಇನ್ನಿತರ ಯುದ್ಧ ಪರಿಕರಗಳು ಮೈಸೂರಿಗೆ ಬರಲಿವೆ. ಆ ನಂತರ ಅವುಗಳನ್ನು ಸ್ಮಾರಕದ ಮುಂದೆ ಪ್ರತಿಷ್ಠಾಪಿಸಲಾಗುತ್ತದೆ.

ಅಲಂಕಾರಿಕ ಗಿಡಗಳ ಆಕರ್ಷಣೆ

ಹಂತ ಹಂತವಾಗಿ ಯುದ್ಧ ಸ್ಮಾರಕದ ಸುತ್ತ ಇರುವ ಮೈದಾನದಲ್ಲಿ ಪಾರಂಪರಿಕ ಗಿಡ ಹಾಗೂ ಅಲಂಕಾರಿಕ ಗಿಡಗಳನ್ನು ನೆಟ್ಟು ಪೋಷಿಸಲಾಗುತ್ತದೆ. ಮೈಸೂರಿಗೆ ಬರುವ ಪ್ರವಾಸಿಗರು ಯುದ್ಧ ಸ್ಮಾರಕವನ್ನು ಬಂದು ವೀಕ್ಷಣೆ ವಾಡುವ ಮೂಲಕ ದೇಶ ಭಕ್ತಿ ಪಸರಿಸಲು ಬೇಕಾದ ವಾತಾವರಣ ಸಷ್ಟಿಸಲು ಉದ್ದೇಶಿಸಲಾಗಿದೆ. ಅದಲ್ಲದೆ ಉದ್ಯಾನದ ಅಭಿವದ್ಧಿಗೆ ಮುಡಾ ಹಾಗೂ ಪಾಲಿಕೆ ನೆರವನ್ನು ಪಡೆಯಲು ಯೋಜಿಸಲಾಗಿದೆ.

ಯುದ್ಧ ಸ್ಮಾರಕ ನಿರ್ವಾಣ ವಾಜಿ ಯೋಧರ ಬಹುದಿನಗಳ ಕನಸಾಗಿದೆ. 2000ರಲ್ಲಿ ವಾಜಿ ಯೋಧರು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಡಿ.ರಂದೀಪ್ ಜಿಲ್ಲಾಧಿಕಾರಿಯಾಗಿದ್ದ ವೇಳೆ ಸ್ಮಾರಕಕ್ಕೆ ಜಾಗ ಮಂಜೂರಾಗಿತ್ತು. ಎನ್‌ಸಿಸಿ ಮೈದಾನದಲ್ಲಿ 2022ರ ಜುಲೈ 29ರಂದು ಸರ್ವಧರ್ಮದ ಪ್ರಾರ್ಥನೆಯೊಂದಿಗೆ ವಾಜಿ ಯೋಧರು, ಸಂತ್ರಸ್ತ ಕುಟುಂಬಗಳ ಸದಸ್ಯರೊಂದಿಗೆ ಜಿಲ್ಲಾಡಳಿತದ ವತಿಯಿಂದ ಕಾಮಗಾರಿಗೆ ಭೂಮಿಪೂಜೆ ವಾಡಲಾಗಿತ್ತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಸ್ತುವಾರಿಯಲ್ಲಿ ಲೋಕೋಪಯೋಗಿ ಇಲಾಖೆಯು ಪಾರಂಪರಿಕ ಶೈಲಿಯಲ್ಲಿ ನಿರ್ವಾಣ ಕಾಮಗಾರಿ ಕೈಗೊಂಡಿದೆ. 2023ರ ಜುಲೈ 26ರ ಕಾರ್ಗಿಲ್ ವಿಜಯ ದಿನದಂದೇ ಕಾಮಗಾರಿಯು ಪೂರ್ಣಗೊಳ್ಳುವ ಗುರಿ ಹಾಕಿಕೊಳ್ಳಲಾಗಿತ್ತು. ಆದರೆ, ವಿವಿಧ ಅಡೆತಡೆಗಳ ಕಾರಣದಿಂದ ಗಡುವಿನ ಒಳಗೆ ಇದು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ.

ಸ್ಮಾರಕ ನಿರ್ವಾಣಕ್ಕೆ ಚಾಮರಾಜನಗರದ ಅಮಚವಾಡಿಯ ಪಟೇಲ್ ಪುಟ್ಟವಾದಯ್ಯ ಎಂಬುವರು 1 ಕೋಟಿ ರೂ.ಮೌಲ್ಯದ ಕಪ್ಪುಶಿಲೆಯನ್ನು ಕೊಡುಗೆಯಾಗಿ ನೀಡಿದ್ದಾರೆ. ಶ್ರೀನಾಥ್ ಎಂಬುವರು 200 ಟನ್ ಕಲ್ಲುಗಳನ್ನು ನೀಡಿದ್ದಾರೆ. ಹಾಸನದ ದಾನಿಯೊಬ್ಬರು 25 ಲಕ್ಷ ರೂ.ಮೌಲ್ಯದ ಹಾಸನದ ಹಸಿರು ಗ್ರಾನೈಟ್ ಕಲ್ಲುಗಳನ್ನು ನೀಡಿದ್ದಾರೆ. ಈ ಮೂವರೂ ನೀಡಿರುವ ಕಲ್ಲುಗಳ ಮೌಲ್ಯ ಅಂದಾಜು 1.5 ಕೋಟಿ ರೂಪಾಯಿಗಿಂತ ಹೆಚ್ಚಿದೆ.

ಯುದ್ಧ ಸ್ಮಾರಕದ ಅಂತಿಮ ಹಂತದ ಕಾಮಗಾರಿ ತ್ವರಿತಗತಿಯಲ್ಲಿ ನಡೆಯುತ್ತಿದೆ. ಸ್ಮಾರಕಕ್ಕಾಗಿ ಚಾಮರಾಜನಗರ ಹಾಗೂ ಹಾಸನದಿಂದ ದಾನವಾಗಿ ಪಡೆದಿರುವ ಉತ್ಕೃಷ್ಟ ಶಿಲೆಗೆ ರೂಪ ನೀಡಿ, ಮೊದಲ ಹಂತದ ಪಾಲಿಶ್ ಕಾರ್ಯ ಪೂರ್ಣಗೊಳಿಸಲಾಗುತ್ತಿದೆ. ಸ್ಮಾರಕದ ಬುನಾದಿ ಮೇಲೆ ಬಹತ್ ಕಂಬಗಳನ್ನು ಜೋಡಣೆ ವಾಡಲಾಗಿದೆ. ಶ್ರೀದಲ್ಲೇ ಕೆಲಸ ಪೂರ್ಣಗೊಳ್ಳಲಿದೆ. ಸಿ.ಎಲ್.ಆನಂದ್, ಹಿರಿಯ ಕೆಎಎಸ್ ಅಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net