

ಮೈಸೂರು: ಕಿರಿಯ ವಯಸ್ಸಿನಲ್ಲಿ ಹಿರಿಯ ಸಾಧನೆ ಮಾಡಿ ನಮ್ಮೆಲ್ಲರ ಮನಸ್ಸಿನಲ್ಲಿ ಸದಾ ಹಸಿರಾಗಿರುವ ನಟ ಡಾ. ಪುನೀತ್ ರಾಜಕುಮಾರ್ ಕೈಗೊಂಡ ಕಾರ್ಯಗಳು ನಮಗೆಲ್ಲ ಮಾದರಿಯಾಗಿವೆ ಎಂದು ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ ಹೇಳಿದರು.
ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ ಮತ್ತು ಅಪ್ಪು ಅಭಿಮಾನಿ ಬಳಗ ವತಿಯಿಂದ ಪ್ರಾಧಿಕಾರದ ಆವರಣದಲ್ಲಿ ನಟ ಡಾ. ಪುನೀತ್ ರಾಜ್ ಕುಮಾರ್ ಅವರ ಪ್ರಥಮ ವರ್ಷದ ಪುಣ್ಯಸ್ಮರಣೆಯ ಅಂಗವಾಗಿ ಭಾನುವಾರ ಹಮ್ಮಿಕೊಂಡ ಗಂಧದಗುಡಿ ಚಿತ್ರಕಲಾ ಸ್ಪರ್ಧೆಯಲ್ಲಿ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಪುನೀತ್ ರಾಜ್‌ಕುಮಾರ್ ಅವರ ಆದರ್ಶಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಸ್ಪರ್ಧೆಯಲ್ಲಿ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. 8 ರಿಂದ 12 ವರ್ಷದ ವಿಭಾಗದಲ್ಲಿ ಧೃತಿ ವಿಶಾ (ಪ್ರಥಮ), ಹರ್ಷಿತಾ (ದ್ವಿತೀಯ), ದ್ವೀತಿಚಾನಸ್ಯ (ತೃತೀಯ), 12 ರಿಂದ 18 ವರ್ಷದ ವಿಭಾಗದಲ್ಲಿ ಕುಮಾರ್ ನಾಯಕ್ (ಪ್ರಥಮ), ವಿಷ್ಣು ಪ್ರಸಾದ (ದ್ವಿತೀಯ), ಅಭಿಜ್ನ (ತೃತೀಯ), 18ವರ್ಷ ಮೇಲ್ಪಟ್ಟ ವಿಭಾಗದಲ್ಲಿ ಎಸ್. ಮದುಸೂದನ್ (ಪ್ರಥಮ), ಮಹೇಶ್ ಬಸವೇಗೌಡ (ದ್ವಿಈಯ), ಬಂಗಾರ (ತೃತೀಯ) ಬಹುಮಾನ ಪಡೆದರು.
ಜೆಡಿಎಸ್ ಮುಖಂಡ ಜಿ. ಮಂಜು ಗೌಡ, ಬಿಜೆಪಿ ಮಹಿಳಾ ಮೋರ್ಚಾ ನಗರ ಅಧ್ಯಕ್ಷೆ ಹೇಮ ನಂದೀಶ್, ಮುಡಾ ಸದಸ್ಯೆ ಲಕ್ಷ್ಮೀದೇವಿ, ಬಿಜೆಪಿ ಮುಖಂಡ ಪರಮೇಶ್ ಗೌಡ, ವಿಕ್ರಂ ಅಯ್ಯಂಗಾರ್, ಮನೋ ವಿಜ್ಞಾನಿ ಡಾ.ರೇಖಾ, ಶಶಿಕಲಾ, ಚಿತ್ರಕಲಾ ಶಿಕ್ಷಕರಾದ ಅನಿತಾ, ರವಿಚಂದ್ರ, ಕಾಂಗ್ರೆಸ್ ಮುಖಂಡರಾದ ರೇಖಾ ಶ್ರೀನಿವಾಸ್, ಸವಿತಾ ಘಾಟ್ಕೆ, ವಿದ್ಯಾ ಹಾಗೂ ಇತರರು ಇದ್ದರು.