ಮೈಸೂರಿನಲ್ಲಿ 1.22 ಕೆಜಿ ಗಾಂಜಾ, ಸ್ಕೂಟರ್ ವಶ

ganja
Published on

ಮೈಸೂರು: ಗಾಂಜಾ ಸಾಗಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಿರುವ ಸಿಇಎನ್ ಕ್ರೈಂ (ಸೆನ್) ಪೊಲೀಸರು ಆರೋಪಿಯಿಂದ 37 ಸಾವಿರ ರೂ. ಮೌಲ್ಯದ 1.22 ಕೆ.ಜಿ. ಗಾಂಜಾ ಹಾಗೂ ಒಂದು ಡಿಯೋ ಸ್ಕೂಟರ್ ಅನ್ನು ವಶಪಡಿಸಿಕೊಂಡಿದ್ದಾರೆ.
ಎಂ.ಜಿ. ರಸ್ತೆಯಲ್ಲಿ ಶುಕ್ರವಾರ ಗಸ್ತಿನಲ್ಲಿರುವಾಗ ಅನುಮಾನದ ಮೇಲೆ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತ ಗಾಂಜಾ ಪೆಡ್ಲರ್ ಆಗಿದ್ದು, ಅತನ ಬಳಿ ಗಾಂಜಾ ಇರುವುದು ಪತ್ತೆಯಾಗಿದೆ. ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿಇಎನ್ ಕ್ರೈಂ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಪ್ರಸನ್ನಕುಮಾರ್, ಪಿಎಸ್‌ಐ ಎನ್.ಅನಿಲ್‌ಕುಮಾರ್, ಸಿಬ್ಬಂದಿ ಟಿ.ಪಿ. ನಾಗೇಂದ್ರ, ಕೆ.ಎಸ್.ಶ್ರೀನಿವಾಸ್, ವಿ.ಎ.ಮಧು, ಕೆ.ಎಲ್.ಭವಾನಿ ಕಾರ್ಯಾಚರಣೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net