ಮೈಸೂರಿನ ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿ ನೂತನ ವಿಆರ್‌ಎಲ್ ಶಾಖೆ ಆರಂಭ

2
Published on

ಮೈಸೂರು: ಮೈಸೂರಿನ ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿ ವಿಆರ್‌ಎಲ್ ಲಾಜಿಸ್ಟಿಕ್ಸ್ ಲಿಮಿಟೆಡ್ ಶಾಖಾ ಕಚೇರಿ ಗುರುವಾರ ಪ್ರಾರಂಭವಾಗಿದೆ.

ಇಲ್ಲಿರುವ ರಾಜ್ಯ ಉಗ್ರಾಣ ನಿಗಮದ ಮಳಿಗೆಯಲ್ಲಿ ತೆರೆದಿರುವ ಶಾಖೆಯ ಕಚೇರಿಯಲ್ಲಿ ಗೂಡ್ಸ್ ಬುಕ್ಕಿಂಗ್ ಮತ್ತು ಪಾರ್ಸೆಲ್ ಡೆಲವರಿ ಸೇವೆ ದೊರೆಯಲಿದೆ. ಪೂಜಾ ವಿಧಿವಿಧಾನಗಳನ್ನು ನೆರವೇರಿಸುವ ಮೂಲಕ ಶಾಖಾ ಕಚೇರಿಯನ್ನು ಸರಳವಾಗಿ ಉದ್ಘಾಟಿಸಲಾಯಿತು.

ನಗರದ ಸಯ್ಯಜಿರಾವ್ ರಸ್ತೆಯಲ್ಲಿರುವ ಬಂಬೂ ಬಜಾರ್‌ನಲ್ಲಿ ವಿಆರ್‌ಎಲ್ ಸಂಸ್ಥೆಯ ಕಚೇರಿ ಈಗಾಗಲೇ ಕಾರ್ಯನಿರ್ವಹಿಸುತ್ತಿದೆ. ಗೂಡ್ಸ್ ಬುಕ್ಕಿಂಗ್ ಮತ್ತು ಪಾರ್ಸೆಲ್ ಸೇವೆಗಾಗಿ ಹೆಬ್ಬಾಳು ಪ್ರದೇಶದ ಜನರು 7 ಕಿಲೋಮೀಟರ್ ದೂರದಿಂದ ಬರಬೇಕಿತ್ತು. ಹಾಗಾಗಿ, ಈ ಭಾಗದ ಜನರಿಗೆ ಅನುಕೂಲ ಮತ್ತು ತ್ವರಿತ ಸೇವೆ ಕಲ್ಪಿಸಿಕೊಡಲು ಈ ಶಾಖೆಯನ್ನು ತೆರೆಯಲಾಗಿದೆ.

ಇದರೊಂದಿಗೆ ನಗರದಲ್ಲಿ ವಿಆರ್‌ಎಲ್ ಸಂಸ್ಥೆ ತನ್ನ ಕಾರ್ಯವ್ಯಾಪ್ತಿ ವಿಸ್ತರಣೆ ಮಾಡಿಕೊಂಡಿದೆ. ಇದರಿಂದ ಈ ಭಾಗದ ಗ್ರಾಹಕರಿಗೆ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ವಿಆರ್‌ಎಲ್ ಮೈಸೂರು ಶಾಖೆಯ ಪ್ರಧಾನ ವ್ಯವಸ್ಥಾಪಕ ಅಶೋಕ ಯಂಡಿಗೇರಿ ತಿಳಿಸಿದರು. ಶಾಖೆಯ ಸೇವೆಗಳ ಕುರಿತು ಮಾಹಿತಿಗಾಗಿ ಮೊ.9341488052 ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net