ಮೈಸೂರಿನ ಯೋಗ ಗುರು ಡಾ.ರಾಘವೇಂದ್ರ ಪೈಗೆ ಅಮೆರಿಕದಲ್ಲಿ ಜೀವನ ಸಾಧನಾ ಪ್ರಶಸ್ತಿ ಪ್ರದಾನ

Yoga guru Dr. Raghavendra Pai was presented with an award
Published on

ಮೈಸೂರು: ಮೈಸೂರು ಮೂಲದ ಅಂತಾರಾಷ್ಟ್ರೀಯ ಖ್ಯಾತಿಯ ಯೋಗ ಗುರು ಡಾ. ರಾಘವೇಂದ್ರ ಪೈ ಅವರಿಗೆ ಇತ್ತೀಚೆಗೆ ಅಮೆರಿಕದ ಫ್ಲೋರಿಡಾದಲ್ಲಿ ನಡೆದ ನಡೆದ ಭಾರತ-ಯುಎಸ್‌ಎ ಗ್ಲೋಬಲ್ ಯೋಗ ಫೆಸ್ಟಿವಲ್ ಸಂದರ್ಭದಲ್ಲಿ ಜೀವನ ಸಾಧನಾ ಪ್ರಶಸ್ತಿ ಪ್ರದಾನ ಮಾಡಲಾಯಿತು.

‘ಯೋಗಿಕ್ ವಾಕ್- ಪೈ ಸೂತ್ರಗಳು’ ಎಂಬ ವಿಶಿಷ್ಟ ಯೋಗ ಮಾರ್ಗದ ಸಂಶೋಧನೆ ಹಾಗೂ ಜಗತ್ತಿನಾದ್ಯಾಂತ ಯೋಗ, ಸಾಧನೆ ಮತ್ತು ಆತ್ಮನಾಯಕತ್ವದ ಪ್ರಚಾರಕ್ಕಾಗಿ ಈ ಪ್ರಶಸ್ತಿಯನ್ನು ನೀಡಲಾಯಿತು. ಈ ಸಂದರ್ಭ ತ್ರೈಯೋಗ ಸಂಸ್ಥೆಯ ಸ್ಥಾಪಕಿ ಡಾ. ಯೋಗಿನಿ ಕಾಳಿಜೀ, ಯೋಗಿ ಹರಿ ಆಶ್ರಮದ ಡಾ. ಯೋಗಿ ಹರಿ, ರೋಟರಿ ಇಂಟರ್‌ನ್ಯಾಷನಲ್ ಮಾಜಿ ಗವರ್ನರ್ ಬಾಲಮೂರ್ತಿ, ಯೋಗ ಯುನಿವರ್ಸಿಟಿ ಆಫ್ ಅಮೆರಿಕಾಸ್ ಅಧ್ಯಕ್ಷ ಡಾ. ಮನೋಹರನ್, ರೋಟರಿ ಬೆಂಗಳೂರು ಗ್ಲೋಬಲ್ ಅಧ್ಯಕ್ಷ ಡಾ. ಯೋಗಿ ದೇವರಾಜ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net