

ಹುಬ್ಬಳ್ಳಿ: ಮೈಸೂರಿನ ಜೆಎಸ್ಎಸ್ ವಿಶೇಷಚೇತನರ ಪಾಲಿಟೆಕ್ನಿಕ್ನಲ್ಲಿ 2023-24ನೇ ಸಾಲಿಗೆ ಮೂರು ವರ್ಷಗಳ ಅವಧಿಗೆ 7 ಡಿಪ್ಲೊಮಾ ಕೋರ್ಸ್ಗಳ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಪ್ರಾಧ್ಯಾಪಕ ಶಿವಕುಮಾರ ಸ್ವಾಮಿ ತಿಳಿಸಿದರು.
ಹುಬ್ಬಳ್ಳಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನುದಾನಕ್ಕೆ ಒಳಪಟ್ಟ ಅರ್ಕಿಟೆಕ್ಚರ್ ಅಸಿಸ್ಟೆಂಟ್ಶಿಪ್, ಕಮರ್ಷಿಯಲ್ ಪ್ರ್ಯಾಕ್ಟಿಸ್, ಕಂಪ್ಯೂಟರ್ ಸೈನ್ಸ್ ಆಂಡ್ ಇಂಜಿನಿಯರಿಂಗ್, ಅನುದಾನ ರಹಿತ ಜುವೆಲ್ಲರಿ ಡಿಸೈನ್ಆಂಡ್ ಟೆಕ್ನಾಲಜಿ, ಇಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಶನ್ ಇಂಜಿನಿಯರಿಂಗ್, ಕಂಪ್ಯೂಟರ್ ಅಪ್ಲಿಕೇಶನ್ಸ್ ಹಾಗಾ ಅಪರೆಲ್ ಡಿಸೈನ್ ಆಂಡ್ ಫ್ಯಾಬ್ರಿಕೇಶನ್ ಟೆಕ್ನಾಲಜಿ ಕೋರ್ಸ್ಗಳಿಗೆ ಒಟ್ಟು 330 ಅಭ್ಯರ್ಥಿಗಳು ಪ್ರವೇಶ ಪಡೆಯಬಹುದಾಗಿದೆ ಎಂದು ಹೇಳಿದರು.
ಮೇ 5ರಿಂದ ಅರ್ಜಿ ಆಹ್ವಾನಿಸಿದ್ದು, ಜೂನ್ 15ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಜುಲೈ 3 ಮತ್ತು 4ರಂದು ಅಂಕವೈಕಲ್ಯದ ಕುರಿತು ವೈದ್ಯಕೀಯ ಪರೀಕ್ಷೆ, ಪ್ರಮಾಣ ಪತ್ರಗಳ ಪರೀಶಿಲನೆ ನಡೆಸಲಾಗುವುದು. ಎಸ್ಎಸ್ಎಲ್ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾದವರು ಪ್ರವೇಶ ಪಡೆಯಬಹುದು. ಸಂಸ್ಥೆಯು ಗ್ರಂಥಾಲಯ, ಜಿಮ್ಾನ, ಒಳ ಮತ್ತು ಹೊರ ಕ್ರೀಡಾಂಗಣ ಸೌಲಭ್ಯ ಹೊಂದಿದೆ. ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವಸತಿ ನಿಲಯದ ವ್ಯವಸ್ಥೆ ಇರುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಡಾ. ಪಳಿನಿಸ್ವಾಮಿ, ಡಾ. ಎಂ.ಬಿ. ರಘು ಹಾಗೂ ಜಿ.ಆರ್. ನಿಡವಣಿ ಇದ್ದರು.