ಮೈಸೂರಲ್ಲಿ ಶುಶ್ರೂಷಾ ಕಾಲೇಜು ಆರಂಭಕ್ಕೆ ಚಿಂತನೆ

CTD M.C.RAGUCHANDAN
Published on

ಚಿತ್ರದುರ್ಗ: ದೇವರಾಜ ಅರಸು ಶಿಕ್ಷಣ ಸಂಸ್ಥೆಯಿಂದ ಮುಂದಿನ ವರ್ಷದಿಂದ ಮೈಸೂರಿನಲ್ಲಿ ನರ್ಸಿಂಗ್ ಕಾಲೇಜು ಆರಂಭಿಸುವ ಚಿಂತನೆ ಇದೆ ಎಂದು ಸಂಸ್ಥೆಯ ಸಿಇಒ ಎಂ.ಸಿ.ರಘುಚಂದನ್ ಹೇಳಿದರು.
ನಗರದ ದೇವರಾಜು ಅರಸು ಶಿಕ್ಷಣ ಸಂಸ್ಥೆಯಲ್ಲಿ ಸೋಮವಾರ ಎಸ್‌ಎಲ್‌ವಿ ಕಾಲೇಜ್ ಆಫ್ ನರ್ಸಿಂಗ್ ಹಾಗೂ ವೆಂಕಟೇಶ್ವರ ಕಾಲೇಜ್ ಆಫ್ ನರ್ಸಿಂಗ್ ವಿದ್ಯಾರ್ಥಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
25 ವರ್ಷಗಳ ಹಿಂದೆ ನರ್ಸಿಂಗ್ ಕಾಲೇಜು ಪ್ರಾರಂಭಿಸಿದ್ದಾಗ ಕೇರಳದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶ ಪಡೆದಿದ್ದರು. ಇಲ್ಲಿ ಓದಿದ ಅನೇಕರು ಅಮೆರಿಕ, ಲಂಡನ್, ಆಸ್ಟ್ರೇಲಿಯಾ, ದುಬೈ ಮತ್ತಿತರೆಡೆ ವೃತ್ತಿಯಲ್ಲಿದ್ದಾರೆ. ಈ ವರ್ಷ ಪ್ರವೇಶ ಪಡೆದವರು ಚೆನ್ನಾಗಿ ಓದಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ಸಂಸ್ಥೆಗೆ ಕೀರ್ತಿ ತರಬೇಕು ಎಂದರು.
ವೈದ್ಯ ಮತ್ತು ನರ್ಸಿಂಗ್ ಪವಿತ್ರ ವೃತ್ತಿಗಳು. ವೈದ್ಯರು- ಶುಶ್ರೂಷಾ ಸಿಬ್ಬಂದಿ ಕಣ್ಣಿಗೆ ಕಾಣುವ ದೇವರುಗಳು. ರೋಗಿಗಳಿಗೆ ಮಾನವೀಯ ನೆಲೆಯಲ್ಲಿ ಚಿಕಿತ್ಸೆ ನೀಡುವುದರೊಂದಿಗೆ ಅವರ ಅಮೂಲ್ಯ ಪ್ರಾಣ ಉಳಿಸುವ ಮಹತ್ವದ ಜವಾಬ್ದಾರಿ ತಮ್ಮ ಮೇಲಿದೆ. ಹಾಗಾಗಿ ನರ್ಸಿಂಗ್ ಶಿಕ್ಷಣಕ್ಕೆ ಪ್ರವೇಶ ಪಡೆದಿರುವ ನಿಮ್ಮ ಗುರಿ ಶಿಕ್ಷಣದ ಕಡೆಯಿರಬೇಕು ಎಂದು ಕಿವಿಮಾತು ಹೇಳಿದರು.
ಎಸ್‌ಎಲ್‌ವಿ ನರ್ಸಿಂಗ್ ಕಾಲೇಜು ಪ್ರಾಚಾರ್ಯ ಎಂ.ಎಂ.ಮಹಾಂತೇಶ್, ಪ್ರಕೃತಿ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಪ್ರಾಚಾರ‌್ಯ ಡಾ.ಎಸ್.ಬಿ.ನವಾಜ್ ಅಹಮದ್,ಆದ್ಯಾ ಕಾಲೇಜ್ ಆಫ್ ಫಾರ್ಮಸಿ ಪ್ರಾಚಾರ‌್ಯ ಡಾ.ಎಂ.ಎನ್.ಪಾಲಾಕ್ಷ, ಎಸ್‌ಎಲ್‌ವಿ ಪಿಯು ಕಾಲೇ ಜು ಪ್ರಾಚಾರ‌್ಯ ಯು.ಕೇಶವಮೂರ್ತಿ, ಇಂಡಿಯನ್ ಇಂಟರ್‌ನ್ಯಾಷನಲ್ ಸ್ಕೂಲ್ ಮುಖ್ಯ ಶಿಕ್ಷಕ ಆರ್.ಸಿ.ತಿಪ್ಪೇಸ್ವಾಮಿ ಇತರರು ಇದ್ದರು.
(ಸಿಟಿಡಿ 8 ಎಂಸಿ ರಘುಚಂದನ್)
ಚಿತ್ರದುರ್ಗ ದೇವರಾಜ ಅರಸು ಶಿಕ್ಷಣ ಸಂಸ್ಥೆಯಲ್ಲಿ ಸೋಮವಾರ ಏರ್ಪಡಿಸಿದ್ದ ನರ್ಸಿಂಗ್ ವಿದ್ಯಾರ್ಥಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಸಂಸ್ಥೆ ಸಿಇಒ ಎಂ.ಸಿ.ರಘುಚಂದನ್ ಉದ್ಘಾಟಿಸಿದರು. ಎಂ.ಎಂ.ಮಹಾಂತೇಶ್, ಡಾ.ಎಸ್.ಬಿ.ನವಾಜ್‌ಅಹಮದ್, ಡಾ.ಎಂ.ಎನ್.ಪಾಲಾಕ್ಷ, ಯು.ಕೇಶವಮೂರ್ತಿ, ಆರ್.ಸಿ.ತಿಪ್ಪೇಸ್ವಾಮಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net