

ಮೈಸೂರು: ಮೈಸೂರು ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ಸಂಭಾವನೆಯನ್ನು ಪರಿಷ್ಕರಣೆ ಮಾಡಲಾಗಿದೆ. ಇದರಿಂದ ಅಂದಾಜು 861 ಅರೆಕಾಲಿಕ ಬೋಧಕರಿಗೆ ಅನುಕೂಲವಾಗಲಿದೆ.
ಈ ಕುರಿತು ಮೈಸೂರು ವಿಶ್ವವಿದ್ಯಾಲಯ ಸಿಂಡಿಕೇಟ್ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಇದು ಮುಂದಿನ ಅಕ್ಟೋಬರ್‌ನಿಂದ ಜಾರಿಗೆ ಬರಲಿದೆ. ವಾರಕ್ಕೆ 4 ಗಂಟೆ ಕಾರ್ಯಭಾರ ಹೊಂದಿರುವ ಎನ್‌ಇಟಿ, ಎಸ್‌ಎಲ್‌ಇಟಿ, ಪಿಎಚ್.ಡಿ ವಿದ್ಯಾರ್ಹತೆ ಹೊಂದಿರುವ ಅತಿಥಿ ಉಪನ್ಯಾಸಕರಿಗೆ 8,500ರಿಂದ 12 ಸಾವಿರ ರೂ. ಹೆಚ್ಚಿಸಲಾಗಿದೆ. ಅಂತೆಯೇ, ವಾರಕ್ಕೆ 8 ಗಂಟೆ ಕಾರ್ಯಭಾರ ಹೊಂದಿರುವವರಿಗೆ 18,500ರಿಂದ 24 ಸಾವಿರ ರೂ. ಮತ್ತು 12 ಗಂಟೆ ಕಾರ್ಯಭಾರ ಹೊಂದಿವವರಿಗೆ 28,500ರಿಂದ 37 ಸಾವಿರ ರೂ.ಗೆ ಹೆಚ್ಚಿಸಲಾಗಿದೆ.
ಈ ಮೇಲಿನ ವಿದ್ಯಾರ್ಹತೆ ಇಲ್ಲದ ಅತಿಥಿ ಉಪನ್ಯಾಸಕರಿಗೆ ವಾರಕ್ಕೆ 4 ಗಂಟೆ ಕಾರ್ಯಭಾರ ಹೊಂದಿವವರಿಗೆ 8ರಿಂದ 8,800 ರೂ, 8 ಗಂಟೆ ಕಾರ್ಯಭಾರ ಹೊಂದಿದವರಿಗೆ 16,000ರಿಂದ 17,600 ರೂ ಮತ್ತು 12 ಗಂಟೆ ಕಾರ್ಯಭಾರ ಹೊಂದಿದವರಿಗೆ 24,000 ರೂ.ದಿಂದ 26,400 ರೂ. ಹೆಚ್ಚಿಸಲಾಗಿದೆ. ಕೋರ್ಟ್‌ನಲ್ಲಿ ದಾವೆ ಹೂಡಿರುವ ಅತಿಥಿ ಉಪನ್ಯಾಸಕರಿಗೆ ಇದು ಅನ್ವಯವಾಗುವುದಿಲ್ಲ. ಆಹ್ವಾನಿತ ಉಪನ್ಯಾಸಕರಿಗೆ ವಾರದಲ್ಲಿ 4 ಗಂಟೆ ಕಾರ್ಯಭಾರವನ್ನು ನಿರ್ವವಹಿಸುವವರಿಗೆ ಗಂಟೆಗೆ 700ರಿಂದ 800 ರೂ. ಸಂಭಾವನೆ ನೀಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.