ಮೈಮೇಲೆ ಪೆಟ್ರೋಲ್ ಸುರಿದುಕೊಂಡ ತಿಪ್ಪೇರುದ್ರ ಸ್ವಾಮೀಜಿ

cccccccc swamiii
Published on

ಚಿತ್ರದುರ್ಗ: ಮುರುಘಾ ಶರಣರಿಗೆ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶುಕ್ರವಾರ ಸಂಜೆ ಜಿಲ್ಲಾಸ್ಪತ್ರೆ ಆವರಣದಲ್ಲಿ ನಡೆಯಿತು. ಕೋರ್ಟಿನಿಂದ ಜಿಲ್ಲಾಸ್ಪತ್ರೆಗೆ ಶರಣರು ಕರೆದುಕೊಂಡಿದ್ದ ಪೊಲೀಸರು,ಮತ್ತೆ ಅವರನ್ನು ವಿಚಾರಣಗೆಂದು ಬೇರೆಡೆ ಕರೆದುಕೊಂಡ ಹೋಗಲು ಪೊಲೀಸರು ಸಜ್ಜಾಗುತ್ತಿದ್ದ ವೇಳೆ,ತಿಪ್ಪೇರುದ್ರ ಸ್ವಾಮೀಜಿ ಶರಣರಿಗೆ ಅನ್ಯಾಯವಾಗಿದೆ ಎಂದು ಕಿರುಚಾಡಿ,ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದ್ದಾಗ ಸ್ಥಳದಲ್ಲಿದ್ದ ಪೊಲೀಸರು ತಡೆದು,ಅವರನ್ನು ಕಸ್ಟಡಿಗೆ ತೆಗೆದುಕೊಂಡು ಸಮೀಪದ ಠಾಣೆಗೆ ಕರೆದೊಯ್ಯದರು. ಈ ಹಿಂದೆ ಸ್ವಾಮೀಜಿ ತನಗೆ ಅನ್ಯಾಯವಾಗಿ ಎಂದು ನ್ಯಾಯ ಕೊಡಿಸಿ ಎಂದು ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಬಿ.ಶ್ರೀರಾಮುಲು ಎದುರು ಬಿಜೆಪಿ ಕಚೇರಿ ಬಳಿ ವಿಷ ಕುಡಿದು ಸಾವಿಗೆ ಮುಂದಾಗಿದ್ದರು.ಈ ಸ್ವಾಮೀಜಿ ಅವರು ತುಮಕೂರು ಜಿಲ್ಲೆ ಮಠವೊಂದರಲ್ಲಿ ವಾಸ್ತವ್ಯ ಹೂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net