

ಅರಕಲಗೂಡು: ತಾಲೂಕಿನ ರುದ್ರಪಟ್ಟಣದಲ್ಲಿ ಶ್ರೀ ದೊಡ್ಡಮ್ಮ ತಾಯಿ ಯುವಕರ ಬಳಗ ಹಾಗೂ ಶ್ರೀಧರ್‌ಗೌಡ ಅಭಿಮಾನಿಗಳ ಬಳಗದಿಂದ ಸೋಮವಾರ ಆಯೋಜಿಸಿದ್ದ ಜೋಡಿ ಕರುಗಳ ಓಟದ ಸ್ಪರ್ಧೆ ನೋಡುಗರ ಮೈನವಿರೇಳಿಸಿತು.
ಕಾಂಗ್ರೆಸ್ ಮುಖಂಡ ಎಚ್.ಪಿ.ಶ್ರೀಧರ್‌ಗೌಡ ಎತ್ತಿನಬಂಡಿ ಏರಿ ಜೋಡಿ ಕರುಗಳನ್ನು ಓಡಿಸುವ ಮೂಲಕ ಚಾಲನೆ ನೀಡಿ, ಗ್ರಾಮೀಣ ಕ್ರೀಡೆಗಳು ಮನರಂಜನೆಗೆ ಅಲ್ಲದೆ ನಮ್ಮ ದೇಸಿಯ ಕ್ರೀಡೆಗಳನ್ನು ಉತ್ತೇಜಿಸಲು ಉಪಯುಕ್ತವಾಗಿದೆ. ಹೀಗಾಗಿ ಗ್ರಾಮೀಣ ಕ್ರೀಡೆಗಳನ್ನು ಉಳಿಸುವುದು ಅತ್ಯವಶ್ಯಕ ಎಂದು ಹೇಳಿದರು.
ಜೋಡಿ ಕರುಗಳ ಓಟದ ಸ್ಪರ್ಧೆಯಲ್ಲಿ ರುದ್ರಪಟ್ಟಣದ ರೈತ ಸಂತೋಷ್ ಪ್ರಥಮ, ಚಪ್ಪರದಹಳ್ಳಿ ರೈತ ರಾಮೇಗೌಡ ದ್ವಿತೀಯ, ಹೊಳೆನರಸೀಪುರ ರೈತ ಮಣಿ ತೃತೀಯ ಹಾಗೂ ಹಾನಗಲ್ ರೈತ ಕರಿಯಾ ಅವರು ನಾಲ್ಕನೇ ಬಹುಮಾನ ಪಡೆದರು.