

ಮದ್ದೂರು: ಉತ್ತಮ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಶಿಂಷಾ ನದಿ ಮೈದುಂಬಿ ಹರಿಯುತ್ತಿದ್ದು, ರೈತರು ಹಾಗೂ ಸಾರ್ವಜನಿರಲ್ಲಿ ಮಂದಹಾಸ ಮೂಡಿದೆ.
2 ವರ್ಷಗಳ ನಂತರ ಎಥೆಚ್ಚೆತ್ತವಾಗಿ ನೀರು ಹರಿಯುತ್ತಿರುವ ಕಾರಣ ಶಿಂಷಾನದಿಗೆ ಜೀವಕಳೆ ಬಂದಿದೆ. ಜತೆಗೆ ತಾಲೂಕಿನ ಕೆರೆ, ಕಟ್ಟೆಗಳು ತುಂಬಿ ಅಂಜರ್ತಲ ವೃದ್ಧಿಯಾಗಲು ಸಹಕಾರಿಯಾಗಿದೆ. ನದಿ ಮೈದುಂಬಿ ಹರಿಯುತ್ತಿರುವುದನ್ನು ಸಾರ್ವಜನಿಕರು ಹಾಗೂ ಯುವಕರು ಮೊಬೈಲ್‌ನಲ್ಲಿ ಸೆರೆ ಹಿಡಿಯುತ್ತಿರುವುದು ಸಾಮಾನ್ಯವಾಗಿದೆ.