ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರನ್ನು ಸೋಲಿಸಿ:ಸಿಐಟಿಯು ಜಿಲ್ಲಾ ಘಟಕ ಕರೆ

ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರನ್ನು ಸೋಲಿಸಿ:ಸಿಐಟಿಯು ಜಿಲ್ಲಾ ಘಟಕ ಕರೆ
Published on

ಹಾಸನ: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರನ್ನು ಸೋಲಿಸಿ.ಕಾಂಗ್ರಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರನ್ನು ಗೆಲ್ಲಿಸುವ ಮೂಲಕ ಅವರನ್ನ ಬೆಂಬಲಿಸುವಂತೆ ಸಿಐಟಿಯು ಕಾರ್ಮಿಕರಿಗೆ ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಧರ್ಮೇಶ್ ಮನವಿ ಮಾಡಿದರು.
ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಕಾರ್ಮಿಕ ವಿರೋಧಿಯಾಗಿ ನಡೆದುಕೊಳ್ಳುತ್ತಿದೆ. ಈ ರೀತಿಯ ಆಡಳಿತ ದೇಶವಿರೋಧಿಯಾಗಿದ್ದು, ಮುಂದಿನ ದಿನಗಳಲ್ಲಿ ಯಾವುದೇ ಅಭಿವೃದ್ಧಿ ಸಾಧಿಸಲು ಸಾಧ್ಯವಿಲ್ಲ ಆದ್ದರಿಂದ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿಗೆ ಮತ ಹಾಕದೆ ಇಂಡಿಯಾ ಮೈತ್ರಿಕೂಟದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಬೆಂಬಲಿಸಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಈ ಲೋಕಸಭೆ ಚುನಾವಣೆಯು ದುಡಿಯುವ ವರ್ಗಕ್ಕೆ ’ಮಾಡು ಇಲ್ಲವೇ ಮಡಿ’ ಹೋರಾಟದಂತಿದೆ.ಬಿಜೆಪಿ ತನ್ನ ಸುಳ್ಳು ಭರವಸೆಗಳ ಮೂಲಕ ಸುಳ್ಳು ಸಾಧನೆಗಳನ್ನು ಘೋಷಣೆಗಳ ಮೂಲಕ ಜನರನ್ನು ದಿಕ್ಕು ತಪ್ಪಿಸುತ್ತಿದೆ. ಕೇಂದ್ರ ಸರ್ಕಾರದ ಹಲವು ನೀತಿಗಳು ಕಾರ್ಮಿಕ ವಿರೋಧಿಯಾಗಿದೆ. ಸಮಾನ ಕನಿಷ್ಠ ವೇತನ ಜಾರಿಗೊಳಿಸುವ ಬದಲಿಗೆ 178 ನೆಲಮಟ್ಟದ ಕೂಲಿ ನಿಗದಿ ಮಾಡಿದ್ದು, 40 ಕೋಟಿ ಆಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯ ಮೂರು ಲಕ್ಷ ಕೋಟಿ ಹಣ ಕೊಡದೆ ನಿವೃತ್ತಿಯ ನಂತರ ಆಸಹಾಯಕ ಬದುಕಿಗೆ ಬಲವಂತವಾಗಿ ನೂಕಲಾಗುತ್ತಿದೆ ಎಂದು ದೂರಿದರು.
ಮೋದಿ ಸರ್ಕಾರಕ್ಕೆ ಅಧಿಕಾರ ನಡೆಸಲು ಅವಕಾಶ ನೀಡಿದ ಮತದಾರರಿಗೆ ತೆರಿಗೆ ಹೆಚ್ಚಳ, ಪೆಟ್ರೋಲ್, ಡೀಸೆಲ್, ಗ್ಯಾಸ್ ಸೇರಿದಂತೆ ಆಗತ್ಯ ವಸ್ತುಗಳ ದುಬಾರಿ ಹೊರೆ ಹಾಗೂ ಕಾಯಂ ಕೆಲಸಗಳನ್ನು ಜಾರಿ ಮಾಡದೆ ಗುತ್ತಿಗೆ ಹೊರಗುತ್ತಿಗೆ ಶಾಶ್ವತಗೊಳಿಸಿದ್ದು ಕಾರ್ಮಿಕ ವಿರೋಧಿಯಾಗಿದೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಎಚ್.ಎಸ್.ಮಂಜುನಾಥ್,ಜಿಲ್ಲಾ ಉಪಾಧ್ಯಕ್ಷೆ ಇಂದಿರಮ್ಮ, ಜಿಲ್ಲಾ ಕಾರ್ಯದರ್ಶಿ ಸೌಮ್ಯಾ, ಖಜಾಂಚಿ ಜಿ.ಪಿ.ಸತ್ಯನಾರಾಯಣ, ಕಾರ್ಯದರ್ಶಿ ಅರವಿದ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net