ಮೈಕ್ರೋ ೈನಾನ್ಸ್‌ನಿಂದ ನಿರಂತರ ಸಮಸ್ಯೆ

20rajesh3
Published on

ಚಾಮರಾಜನಗರ: ಜಿಲ್ಲೆಯಲ್ಲಿರುವ ಮೈಕ್ರೋೈನಾನ್ಸ್‌ಗಳಿಂದ ಸಾಲ ಪಡೆದು ಕಿರುಕುಳ ಅನುಭವಿಸುತ್ತಿರುವ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಂಟ್ರೋಲ್ ರೂಂಗೆ ದೂರು ನೀಡುತ್ತಿದ್ದು, ೈನಾನ್ಸ್‌ಗಳಿಂದ ನಿರಂತರ ಸಮಸ್ಯೆ ಅನುಭವಿಸುತ್ತಿರುವುದು ಬೆಳಕಿಗೆ ಬರುತ್ತಿದೆ. ‘

ಜಿಲ್ಲಾಧಿಕಾರಿ ಕಚೇರಿಯ ಕಂಟ್ರೋಲ್ ರೂಂ ನೀಡಿರುವ ಮಾಹಿತಿಯ ಪ್ರಕಾರ ಚಾಮರಾಜನಗರ ತಾಲೂಕಿನ ವ್ಯಾಪ್ತಿಯಲ್ಲಿ 22, ಗುಂಡ್ಲುಪೇಟೆ 28, ಕೊಳ್ಳೇಗಾಲ 10, ಹನೂರು 3 ಹಾಗೂ ಯಳಂದೂರಿನಿಂದ 3 ದೂರುಗಳನ್ನು ಒಳಗೊಂಡಂತೆ ಒಟ್ಟು 66 ದೂರುಗಳು ದಾಖಲಾಗಿದೆ. ಅದಲ್ಲದೇ ಬೆಳಗಾವಿ, ಹಾವೇರಿ, ಹಾಸನ, ಬೀದರ್, ಗುಲ್ಬರ್ಗ, ಭದ್ರಾವತಿ, ಬೆಂಗಳೂರು ಹಾಗೂ ಇನ್ನಿತರೆ ಹೊರಜಿಲ್ಲೆಗಳಿಂದಲೂ ಸಾರ್ವಜನಿಕರು ಕರೆಮಾಡಿ ಅಳಲು ತೋಡಿಕೊಳ್ಳುತ್ತಿದ್ದಾರೆ.

ಜಿಲ್ಲಾ ವ್ಯಾಪ್ತಿಯಲ್ಲಿರುವ ಖಾಸಗಿ ೈನಾನ್ಸ್‌ಗಳು, ವಿವಿಧ ಸಂಘ-ಸಂಸ್ಥೆಗಳು, ಮೈಕ್ರೋ ೈನಾನ್ಸ್‌ಗಳು ಹಾಗೂ ಇತರೆ ಬ್ಯಾಂಕ್‌ಗಳಿಂದ ಸಾಲ ಪಡೆದಿರುವ ವಿವಿಧ ಗ್ರಾಮಗಳ ಹಲವಾರು ಕುಟುಂಬಗಳು ಸಾಲ ಮರುಪಾವತಿ ಮಾಡಲು ಸಾಧ್ಯವಾಗದೇ, ೈನಾನ್ಸ್‌ನವರು ನೀಡುವ ಕಿರುಕುಳ ತಾಳಲಾರದೇ ಗ್ರಾಮಗಳನ್ನು ತೊರೆದಿರುವ ಪ್ರಕರಣಗಳು ಬೆಳಕಿಗೆ ಬಂದಿತ್ತು.

ಈ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಿಂದ ಕಂಟ್ರೋಲ್ ರೂಂ ತೆರೆದು ಸಮಸ್ಯೆ ಅನುಭವಿಸುವವರು ದೂರು ನೀಡುವಂತೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ಪ್ರಕಟಣೆ ತಿಳಿಸಿದ್ದರು. ಈ ನಿಟ್ಟಿನಲ್ಲಿ ಖಾಸಗಿ ೈನಾನ್ಸ್‌ಗಳಿಂದ ಕಿರುಕುಳ ಅನುಭವಿಸುತ್ತಿರುವ ನೂರಾರು ಜನರು ನಿತ್ಯವೂ ದೂರು ನೀಡುತ್ತಿದ್ದು, ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದಾರೆ. ಖಾಸಗಿ ೈನಾನ್ಸ್‌ನವರು ನೀಡುವ ನಿರಂತರ ಕಿರುಕುಳದಿಂದ ನಮ್ಮನ್ನು ರಕ್ಷಿಸಿ ಎಂದು ಮೊರೆ ಇಡುತ್ತಿದ್ದಾರೆ. ೈನಾನ್ಸ್‌ನವರು ವಿಧಿಸಿರುವ ಅಧಿಕ ಬಡ್ಡಿಯನ್ನು ಕಟ್ಟಲಾರದೇ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಕುರಿತು ಲೌಡ್ ಸ್ಪೀಕರ್‌ನಲ್ಲಿ ಸಂತ್ರಸ್ತರು ಹಾಗೂ ಅಧಿಕಾರಿ ವರ್ಗದಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net