ಮೈಕ್ರೋ ೈನಾನ್ಸ್, ಡ್ರಗ್ಸ್ ಹಾವಳಿಗೆ ಕಡಿವಾಣ ಹಾಕಿ

24rajesh1
Published on

ಚಾಮರಾಜನಗರ: ಜಿಲ್ಲೆಯಲ್ಲಿರುವ ಎಸ್ಟಿ,ಎಸ್ಟಿ ಸಮುದಾಯದ ಯುವಕರು ಡ್ರಗ್ಸ್ ಮತ್ತು ಗಾಂಜಾ ಸೇವನೆಗೆ ತುತ್ತಾಗುತ್ತಿದ್ದು, ಇದನ್ನು ನಿಯಂತ್ರಿಸಿಬೇಕು. ಮೈಕ್ರೋೈನಾನ್ಸ್‌ಗಳು ಹೆಚ್ಚು ಬಡ್ಡಿಯನ್ನು ವಸೂಲಿ ಮಾಡುತ್ತಿದ್ದು, ಅವುಗಳ ಹಾವಳಿಯನ್ನು ತಡೆಗಟ್ಟಬೇಕು ಎಂದು ಎಸ್ಟಿ, ಎಸ್ಟಿ ಮುಖಂಡರು ಒತ್ತಾಯಿಸಿದರು.

ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಂದು ಕೊರತೆ ಸಭೆಯಲ್ಲಿ ಎಸ್ಟಿ, ಎಸ್ಟಿ ಸಮುದಾಯದ ಹಲವಾರು ಸಮಸ್ಯೆಗಳನ್ನು ಚರ್ಚಿಸಲಾಯಿತು. ಈ ವೇಳೆ ಮುಖಂಡ ಬಸವನಪುರ ರಾಜಶೇಖರ್ ಮಾತನಾಡಿ, ಜಿಲ್ಲೆಯಲ್ಲಿರುವ ಎಸ್ಟಿ, ಎಸ್ಟಿ ಯುವಕರು ಇತ್ತೀಚೆಗೆ ಡ್ರಗ್ಸ್ ಮತ್ತು ಗಾಂಜಾಕ್ಕೆ ಬಲಿಯಾಗುತ್ತಿದ್ದಾರೆ. ಈಗಾಗಲೇ ಕೆಲವು ಯುವಕರನ್ನು ಗಾಂಜಾ ಸೇವನೆ ಪ್ರಕರಣದಲ್ಲಿ ಬಂಧನ ಮಾಡಲಾಗಿದೆ. ಅದರಂತೆ ಅದನ್ನು ಮಾರಾಟ ಮಾಡುವವರನ್ನು ಪತ್ತೆ ಹಚ್ಚಿ, ಅವರ ಮೇಲೆಯೂ ಪ್ರಕರಣ ದಾಖಲಿಸಬೇಕು. ಎಸ್ಟಿ,ಎಸ್ಟಿ ಯುವಕರು ಈ ಡ್ರಗ್ಸ್ ಮಾಫಿಯಾಕ್ಕೆ ಬಲಿಯಾಗದಂತೆ ಕಠಿಣ ಕ್ರಮಕೈಗೊಳಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಎಸ್ಪಿ ಡಾ.ಬಿ.ಟಿ.ಕವಿತಾ ಪ್ರತಿಕ್ರಿಯಿಸಿ, ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳಿಗೆ ಸಂಬಂಧಿಸಿದಂತೆ 2020 ನೇ ಸಾಲಿನಲ್ಲಿ 169, 2021 ರಲ್ಲಿ 112, 2022 ರಲ್ಲಿ 115, 2023ರಲ್ಲಿ 141 ಹಾಗೂ 2024 ರಲ್ಲಿ 101 ಪ್ರಕರಣಗಳನ್ನು ದಾಖಲು ಮಾಡಲಾಗಿದೆ. ಅದಲ್ಲದೇ ಅಕ್ರಮವಾಗಿ ಗಾಂಜಾ ಮಾರಾಟದ ಸಂಬಂಧ 2020 ನೇ ಸಾಲಿನಲ್ಲಿ 27 ಪ್ರಕರಣ, 2021ರಲ್ಲಿ 26, 2022ರಲ್ಲಿ 28, 2023ರಲ್ಲಿ 38 ಹಾಗೂ 2024 ರಲ್ಲಿ 25 ಪ್ರಕರಣಗಳು ದಾಖಲಾಗಿದೆ. ಜಿಲ್ಲೆಯಲ್ಲಿ ಮಾದಕ ವಸ್ತುಗಳ ಸೇವನೆ ಮತ್ತು ಮಾರಾಟದ ಬಗ್ಗೆ ಕಠಿಣಕ್ರಮವನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ದ್ಯಾವಾಲಪುರ ಗ್ರಾಮ ಪಂಚಾಯಿತಿ ಸದಸ್ಯ ಶಿವಣ್ಣ ಮಾತನಾಡಿ, ಜಿಲ್ಲೆಯಲ್ಲಿ ಶೇ.80 ಕ್ಕಿಂತಲೂ ಹೆಚ್ಚು ಎಸ್ಟಿ,ಎಸ್ಟಿ ಸಮುದಾಯದ ಜನರು ಮೈಕ್ರೋೈನಾನ್ಸ್‌ಗಳಲ್ಲಿ ಸಾಲ ಪಡೆದುಕೊಂಡಿದ್ದಾರೆ. ಇಲ್ಲಿ ಬಡ್ಡಿಯನ್ನು ಹೆಚ್ಚಳಮಾಡಿದ್ದು, ೈನಾನ್ಸ್‌ನವರು ರಾತ್ರಿಯ ವೇಳೆಯಲ್ಲಿ ಹಣವಸೂಲಿಗೆ ಬರುತ್ತಾರೆ. ಇದರಿಂದ ಹಲವಾರು ಜನರು ಪ್ರಾಣಕಳೆದುಕೊಂಡಿದ್ದಾರೆ. ಮೈಕ್ರೋ ೈನಾನ್ಸ್‌ಗಳ ಹಾವಳಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು. ಯುವ ಮುಖಂಡ ವಿರಾಟ್ ಶಿವು ಮಾತನಾಡಿ, ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಮದ್ಯಪಾನ ಮಾಡುವವರ ಹಾವಳಿ ಹೆಚ್ಚಾಗಿದೆ.

ಪರಿಣಾಮವಾಗಿ ಕಳ್ಳತನವೂ ಹೆಚ್ಚಾಗುತ್ತಿದೆ. ಗಾಳೀಪುರ ಬಡಾವಣೆಯಲ್ಲಿ ಎಸ್ಸಿ,ಎಸ್ಟಿ ಸಮುದಾಯದವರನ್ನು ಗುರಿಯಾಗಿಸಿಕೊಂಡು, ಅನ್ಯ ಕೋಮಿನ ಕೆಲವು ಕಿಡಿಗೇಡಿಗಳು ನಿಂದನೆ ಮಾಡುತ್ತಾರೆ. ಬೈಕ್ ವ್ಹೀಲಿಂಗ್ ಮಾಡುವವರ ಹಾವಳಿ ಹೆಚ್ಚಾಗಿದ್ದು, ಇದಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.

ಈ ವೇಳೆ ಎಸ್ಪಿ ಡಾ.ಬಿ.ಟಿ.ಕವಿತಾ ಅವರು ಪ್ರತಿಕ್ರಿಯಿಸಿ, ರಾತ್ರಿಯಲ್ಲಿ ಬೀಟ್ ಹಾಕುವುದನ್ನು ಹೆಚ್ಚಳ ಮಾಡುತ್ತೇವೆ. ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಸೇವನೆ ಮತ್ತು ಇನ್ನಿತರೆ ಅಕ್ರಮಗಳ ಬಗ್ಗೆ ಕ್ರಮವಹಿಸುವುದಾಗಿ ಭರವಸೆ ನೀಡಿದರು. ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಎಸ್.ಮುನಿರಾಜು, ಡಿವೈಎಸ್ಪಿ ಲಕ್ಷ್ಮಯ್ಯ, ಕೊಳ್ಳೇಗಾಲ ಉಪವಿಭಾಗದ ಡಿವೈಎಸ್ಪಿ ಧರ್ಮೆಂದ್ರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net